ಮೈಸೂರು

ಮಕ್ಕಳ ಆಹಾರ ಮೇಳ

ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಸ್ಕೂಲ್ ನಲ್ಲಿ ಸೈನಿಕರ ಕಲ್ಯಾಣ ನಿಧಿಗೆ ಹಣ ಕೂಡಿಡಲು ಮಕ್ಕಳ ದಿನಾಚರಣೆಯ ಪ್ರಯುಕ್ತ ಒಂದು ದಿನದ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.

ಮಹರ್ಷಿ ಶಾಲೆಯ ಆವರಣದಲ್ಲಿಯೇ ಒಟ್ಟು 20 ಮಳಿಗೆಗಳು ತಲೆಯೆತ್ತಿ ನಿಂತಿದ್ದವು. ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗಳು ಆಹಾರವನ್ನು ಸಿದ್ಧಪಡಿಸಿದ್ದರು. ದೋಸೆ, ಚುರುಮುರಿ, ಹಪ್ಪಳ ಸೇರಿದಂತೆ ವಿವಿಧ ಖಾದ್ಯಗಳು ಅಲ್ಲಿದ್ದವು. ಜಿಲ್ಲಾ ಸಹಕಾರಿ ಒಕ್ಕೂಟ ನಿಯಮಿತದ ಅಧ್ಯಕ್ಷ ಹೆಚ್.ವಿ.ರಾಜೀವ್ ಆಹಾರ ಮೇಳಕ್ಕೆ ಚಾಲನೆ ನೀಡಿದರು.

ಮಹರ್ಷಿ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ಭವಾನಿ ಶಂಕರ್, ಪ್ರಾಂಶುಪಾಲೆ ಲಕ್ಷ್ಮಿ, ಗಿರೀಶ್, ಉಷಾ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: