ಮೈಸೂರು

ಅಂತರಸಂತೆ ಪ್ರಕಾಶನ ಉದ್ಘಾಟನೆ ನ.17ರಂದು

ಅಂತರಸಂತೆ ಪ್ರಕಾಶನ ಉದ್ಘಾಟನೆ, ಭಾವ ಕುಲುಮೆ ಸಂಕಲನ ಲೋಕಾರ್ಪಣೆ, ಕನ್ನಡಿಗರ ಸಹಕಾರ ಜ್ಯೊತಿ ಪತ್ರಿಕೆ ಬಿಡುಗಡೆ ಹಾಗೂ ರಾಜ್ಯೋತ್ಸವ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶಕ ಟಿ.ನಾಗರಾಜು ತಿಳಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ, ನ.17 ಗುರುವಾರ ಮಧ್ಯಾಹ್ನ 12:30ಕ್ಕೆ ಹಳೆ ಜೆ.ಎಸ್.ಎಸ್. ಆಸ್ಪತ್ರೆಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ  ನಡೆಯಲಿರುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡುವರು. ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮಂಡಳಿ ಅಧ್ಯಕ್ಷ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಅಂತರಸಂತೆ ಪ್ರಕಾಶನವನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು ಎಂದು ತಿಳಿಸಿದರು.

ಅವರು ಮುಂದುವರೆದು ಕೆ.ಎಂ. ನಾಗರಾಜು ಅವರ ‘ಭಾವ ಕುಲುಮೆ’ ಕವನ ಸಂಕಲನವನ್ನು ವಿಚಾರವಾದಿ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಬಿಡುಗಡೆಗೊಳಿಸುವರು. ಡಾ.ಸಿ.ಪಿ.ಕೃಷ್ಣಕುಮಾರ್ತಿ ಹಾಗೂ ಹೆಚ್.ವಿ.ರಾಜೀವ್ ಕೃತಿ ಕುರಿತು ಮಾತನಾಡುವರು ಎಂದರು.

ಸನ್ಮಾನ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಬಿ.ಶಾಮಸುಂದರ, ಪ್ರಗತಿಪರ ಕೃಷಿಕ ಪುಟ್ಟಯ್ಯ, ರಂಗಕರ್ಮಿ ರಾಮೇಶ್ವರಿ ವರ್ಮ ಹಾಗೂ ವಿಜ್ಞಾನ ಲೇಖಕ ಜೆ.ಆರ್.ಲಕ್ಷ್ಮಣರಾವ್ ಅವರನ್ನು ಸಂಪಾದಕ ರಾಜಶೇಖರ ಕೋಟಿ ಸನ್ಮಾನಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಅನಂತ ಮತ್ತು ಮೈಸೂರು ಜಿಲ್ಲಾ ವಿಶ್ವಕರ್ಮ ಸಮಾಜಗಳ ಮಹಾಒಕ್ಕೂಟದ ಅಧ್ಯಕ್ಷ ಸಿ.ಹುಚ್ಚಪ್ಪಚಾರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Leave a Reply

comments

Related Articles

error: