ಲೈಫ್ & ಸ್ಟೈಲ್

ದೇಹವನ್ನು ಶುಚಿಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ ನೀರು..!

ನೀರು ಮನುಷ್ಯನ ದೇಹವನ್ನು ವಿಷದಿಂದ ಮುಕ್ತವಾಗಿರಿಸುವುದರ ಜತೆಗೆ ಆರೋಗ್ಯವಾಗಿರುವಂತೆ ಮಾಡುತ್ತದೆ. ರಾತ್ರಿ ಮಲಗುವುದಕ್ಕೂ ಮುನ್ನ ನೀರನ್ನು ಕುಡಿಯುವುದರಿಂದ ದೇಹದ ಎಲ್ಲಾ ಕಲುಷಿತ ಜೀವಾಣುಗಳನ್ನು ನಿವಾರಿಸುತ್ತದೆ ಎಂದು ಆಯುರ್ವೇದ ದೃಢೀಕರಿಸುತ್ತದೆ. ಅದರಲ್ಲೂ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಹಾಯ ಮಾಡುತ್ತದೆ. Related image
ಬಿಸಿ ನೀರು ಅಥವಾ ಬೆಚ್ಚಗಿನ ನೀರನ್ನು ಕುಡಿದರೆ ಅದರಿಂದಾಗುವ ಪ್ರಯೋಜನಗಳು ಇಲ್ಲಿವೆ.
ಶುದ್ಧೀಕರಣ ಮತ್ತು ಶುಚಿಗೊಳಿಸುವಿಕೆ: ದೇಹವನ್ನು ಶುಚಿಗೊಳಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಸ್ಥಿರವಾಗಿ ಸ್ವಚ್ಛಗೊಳಿಸುವ ಮೂಲಕ ಮನುಷ್ಯ ಆರೋಗ್ಯವಾಗಿರಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. Image result for hot water drinking
ಮಲಬದ್ಧತೆಗೆ ಪರಿಹಾರ: ದೇಹದಲ್ಲಿನ ನೀರಿನ ಕೊರತೆಯಿಂದ ಮಲಬದ್ಧತೆ ಉಂಟಾಗುವುದು ಸಾಮಾನ್ಯ. ಕರುಳಿನ ಚಲನೆಯನ್ನು ಸುಧಾರಿಸಲು ಬೆಳಿಗ್ಗೆ ಬೆಚ್ಚಗಿನ ನೀರಿನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆಯಿಂದ ದೂರವಿರಬಹುದು.Related image
ಶೀತ ಮತ್ತು ಕೆಮ್ಮಿಗೆ ಒಳ್ಳೆಯದು: ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಇದು ದಪ್ಪ ಕೆಮ್ಮು / ದ್ರವ ಪದಾರ್ಥವನ್ನು ದ್ರವೀಕರಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಗಂಟಲಿನ ನೋವು ನಿವಾರಣೆಯಾಗುತ್ತದೆ.Image result for hot water drinking
ಬೆವರುವುದು ಹೆಚ್ಚಾಗುತ್ತದೆ: ಬಿಸಿನೀರು / ಚಹಾ / ಕಾಫಿ ಕುಡಿಯುವುದರಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಜೀವಕೋಶಗಳು ಮತ್ತು ದೇಹದಿಂದ ಅಧಿಕ ನೀರು ಮತ್ತು ಉಪ್ಪನ್ನು ತೆಗೆಯುವ ಮೂಲಕ ಚರ್ಮದ ಕೋಶಗಳನ್ನು ಬೆವರುವುದರಿಂದ ಸ್ವಚ್ಛಗೊಳಿಸುತ್ತದೆ. Image result for hot water drinking
ರಕ್ತ ಪರಿಚಲನೆಯು ಸುಧಾರಿಸುತ್ತದೆ: ಬೆಚ್ಚಗಿನ ನೀರನ್ನು ಕುಡಿಯುವ ದೊಡ್ಡ ಪ್ರಯೋಜನವೆಂದರೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ನೀವು ಬಿಸಿನೀರು ಕುಡಿಯುವಾಗ, ದೇಹದಲ್ಲಿ ಹೆಚ್ಚುತ್ತಿರುವ ಕೊಬ್ಬು ಮತ್ತು ನರಮಂಡಲದಲ್ಲಿ ಉಂಟಾಗುವ ಕೊಬ್ಬನ್ನು ನಿವಾರಿಸುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಹಾನಿಕಾರಕ ಜೀವಾಣುಗಳನ್ನು ಹೊರಹಾಕುತ್ತದೆ. (ಪಿ.ಎಸ್)

Leave a Reply

comments

Related Articles

error: