ಮನರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ ನಟಿ ಸಂಜನಾ

ಬೆಂಗಳೂರು,ಡಿ.7-ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿರುವ ನಟಿ ಸಂಜನಾ ಚಿದಾನಂದ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಗೌರವ್ ರಾಯ್ ಅವರನ್ನು ಮದುವೆಯಾಗುತ್ತಿರುವ ಸಂಜನಾ ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಮೂರು ವರ್ಷಗಳಿಂದ ಸ್ನೇಹಿತರಾಗಿದ್ದ ಇವರಿಬ್ಬರು ಇನ್ನು ಕೆಲವೇ ದಿನಗಳಲ್ಲಿ ದಂಪತಿಗಳಾಗಲಿದ್ದಾರೆ. ಗೌರವ್ ಹಾಗೂ ಸಂಜನಾ ಪ್ರೀತಿಗೆ ಇಬ್ಬರು ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ಇಬ್ಬರ ಮನೆಯಲ್ಲಿ ಮದುವೆಯ ವಿಚಾರ ಪ್ರಸ್ತಾಪಿಸಿದ್ದು, ಮುಂದಿನ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, 2019ರಲ್ಲಿ ಮದುವೆ ಆಗಲಿದ್ದಾರಂತೆ.

ಬಿಗ್ ಬಾಸ್ ನಲ್ಲಿ ತಮ್ಮ ಸಹ ಸ್ಪರ್ಧಿಯಾಗಿದ್ದ ನಟ ಭುವನ್ ರನ್ನು ಸಂಜನಾ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಭುವನ್ ಹಾಗೂ ಸಂಜನಾ ನಿಶ್ಚಿತಾರ್ಥ ಫಿಕ್ಸ್ ಆಗಿದೆ. ಇವರಿಬ್ಬರ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆಗಲೇ ಸಂಜನಾ ನಾವಿಬ್ಬರು ಸ್ನೇಹಿತರಷ್ಟೇ ಎಂದು ಸ್ಪಷ್ಟಪಡಿಸಿದ್ದರು. ಅದರಂತೆ ಈಗ ತಮ್ಮ ಗೆಳೆಯ ಗೌರವ್ ರಾಯ್ ರೊಂದಿಗೆ ಮದುವೆ ಮಾಡಿಕೊಳ್ಳುತ್ತಿರುವ ವಿಷಯ ತಿಳಿಸಿ ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

ಬಿಗ್ ಬಾಸ್ ನಂತರ ಸಂಜನಾ ಹಾಗೂ ಭುವನ್ `ಸಂಜು ಮತ್ತು ನಾನು’ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಇನ್ನು ಒಂದು ಸಿನಿಮಾದಲ್ಲಿ ಅಭಿನಯಿಸಿರುವ ಸಂಜನಾ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. (ವರದಿ-ಎಂ.ಎನ್)

Leave a Reply

comments

Related Articles

error: