ಪ್ರಮುಖ ಸುದ್ದಿಮೈಸೂರು

ಮೈಸೂರಿಗೆ ಪತ್ನಿ ಸಮೇತರಾಗಿ ಬಂದ ಪವರ್ ಸ್ಟಾರ್

ಮೈಸೂರು,ಡಿ.7:- ಮೈಸೂರಿಗೆ ಗುರುವಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪತ್ನಿ ಸಮೇತ ಆಗಮಿಸಿದ್ದರು.

ಮೈಸೂರಿಗೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ, ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಆಚರಿಸಿದರು. ಪಾರ್ವತಮ್ಮ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಅವರು ಅವರ ನೆನಪಿನಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹೊಸಬಟ್ಟೆಗಳನ್ನು ನೀಡಿದರು. ಅಲ್ಲಿನ ಮಹಿಳೆಯರು ಮಕ್ಕಳೊಂದಿಗೆ ಕೆಲವು ಕ್ಷಣಗಳನ್ನು ಕಳೆದರು. ಪ್ರಚಾರದಿಂದ ದೂರವುಳಿಯುವ ಪವರ್ ಸ್ಟಾರ್ ಮಾಧ್ಯಮದವರಿಗೆ ಕೊಂಚ ಸುಳಿವನ್ನೂ ನೀಡದೇ ಪೂಜೆ ಮುಗಿಸಿ ಬೆಂಗಳೂರಿಗೆ ತೆರಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: