ದೇಶಪ್ರಮುಖ ಸುದ್ದಿ

ಆಧಾರ್ ಸಂಪರ್ಕ ಗಡುವು ಮಾರ್ಚ್ 31 ವರೆಗೆ ವಿಸ್ತರಣೆ: ಸುಪ್ರೀಮ್‍ಕೋರ್ಟ್‍ನಲ್ಲಿ ಕೇಂದ್ರ

ನವದೆಹಲಿ (ಡಿ.7): ಸರ್ಕಾರಿ ಸೇವೆ ಮತ್ತು ದಿನಬಳಕೆಯ ವಿವಿಧ ವ್ಯವಹಾರಗಳಿಗೆ ಆಧಾರ್ ಸಂಖ್ಯೆಯನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದ್ದು, ಆಧಾರ್‍ ಸಂಖ್ಯೆಯ ಸಂಪರ್ಕಕ್ಕೆ ವಿಧಿಸಲಾಗಿದ್ದ ಗಡುವನ್ನು ಮುಂದಿನ ವರ್ಷ 2018ರ ಮಾರ್ಚ್ 31ರ ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ಹೇಳಿದೆ.

ಯೋಜನೆಗಳು, ಸೇವೆಗಳ ಫಲಾನುಭವಿಗಳು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ್ದು, ಕೇಂದ್ರ ಸರ್ಕಾರದ ಪರ ವಾದ ಮಂಡಿಸುತ್ತಿರುವ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದಕ್ಕೆ ವಿಧಿಸಲಾಗಿರುವ ಗಡುವನ್ನು ಮಾ.31 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಈ ಗಡುವಿನೊಳಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಅನಿವಾರ್ಯವಾಗಿದೆ.

(ಎನ್‍ಬಿಎನ್‍)

Leave a Reply

comments

Related Articles

error: