ಮೈಸೂರು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಪುಸ್ತಕಗಳ ಲೋಕಾರ್ಪಣೆ

ಮೈಸೂರಿನ ಕ್ರಿಯಾಶೀಲ ಹವ್ಯಾಸಿ ರಂಗತಂಡ ಕದಂಬರಂಗ ವೇದಿಕೆಯು ಪುಸ್ತಕಗಳ ಲೋಕಾರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ ನ.17ರ ಗುರುವಾರ ಸಂಜೆ 5:30ಕ್ಕೆ ರಂಗಾಯಣದ ಶ್ರೀರಂಗವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಾಹಿತಿ ಮತ್ತು ಚಿಂತಕ ಡಾ.ಕಾಳೇಗೌಡ ನಾಗವಾರ ಅವರು ಡಾ.ನಂದಾ ಕುಮಾರಸ್ವಾಮಿ ರಚಿಸಿರುವ ಇರುವುದೆಲ್ಲವ ಬಿಟ್ಟು ಹಾಗೂ ಒಂದು ಬಿನ್ನಹ ಕೇಳು, ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಪಾಪು-ಬಾಪು ಬನೇ ಮಹಾತ್ಮ ಹಾಗೂ ಹಿಂದಿಯ ಅನುವಾದ ಕೃತಿ ರಾಮಶರಣಯುಯುತ್ಸು ಅವರ ಆಯ್ದ ಕವಿತೆಗಳನ್ನು ಲೋಕಾರ್ಪಣೆಗೊಳಿಸುವರು. ಡಾ.ಟಿ.ಸಿ.ಪೂರ್ಣಿಮಾ ಮತ್ತು ಡಾ.ತಿಪ್ಪೇಸ್ವಾಮಿ ಪುಸ್ತಕ ಕುರಿತು ಮಾತನಾಡುವರು. ಖ್ಯಾತ ನೃತ್ಯಗಾರ್ತಿ ಜ್ಯೋತಿ ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವೇದಿಕೆಯ ಅಧ್ಯಕ್ಷ ರಾಜಶೇಖರ ಕದಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಸನ್ಮಾನ : ಹಿರಿಯ ರಂಗಕರ್ಮಿ ಮತ್ತು ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ರಾಮೇಶ್ವರಿ ವರ್ಮಾ ಹಾಗೂ ಚಂದನ ವಾಹಿನಿ 2016ರ ಪ್ರಶಸ್ತಿ ಪುರಸ್ಕೃತ ರಂಗಾಯಣದ ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರಗಳನ್ನು ರಂಗಾಭಿಮಾನಿಗಳ ಪರವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಹೆಚ್.ಎಂ.ಕುಮಾರಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

 

 

Leave a Reply

comments

Related Articles

error: