ಮೈಸೂರು

ಅರಮನೆ ನೋಡಲು ಬಂದ ಮಕ್ಕಳಿಗೆ ಸಿಹಿ ಹಂಚಿದ ಜಿಲ್ಲಾಧಿಕಾರಿ

ಮೈಸೂರಿನ ಅರಮನೆಯಲ್ಲಿ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಅರಮನೆಯ ವೀಕ್ಷಣೆಗೆಂದು ಸೋಮವಾರ ನೂರಾರು ಮಕ್ಕಳು ಆಗಮಿಸಿದ್ದರು. ಈ ವೇಳೆ  ಜಿಲ್ಲಾಧಿಕಾರಿ ಡಿ.ರಂದೀಪ್ ಹಾಗೂ ಶಾಸಕ ಎಂ.ಕೆ.ಸೋಮಶೇಖರ್ ತಾವೇ ಖುದ್ದು ಹೂ. ಮತ್ತು ಸಿಹಿಯನ್ನು ನೀಡಿ ಮಕ್ಕಳನ್ನು ಸ್ವಾಗತಿಸಿದರಲ್ಲದೇ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು.

ಈ ಸಂದರ್ಭ ಅರಮನೆಯ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: