ಮೈಸೂರು

ಚಿರತೆ ದತ್ತು ಸ್ವೀಕರಿಸಿದ ಮೈಸೂರು ರೇಸ್ ಕ್ಲಬ್

ಮೈಸೂರು,ಡಿ.7:- ಮೈಸೂರು ರೇಸ್ ಕ್ಲಬ್ ಲಿಮಿಟೆಡ್ 35,000ರೂ.ಗಳನ್ನು ಪಾವತಿಸಿ ಮೈಸೂರು ಮೃಗಾಲಯದ ಒಂದು ಚಿರತೆಯನ್ನು ನ.29ರಿಂದ 2018ರ ನವೆಂಬರ್ 28ರವರೆಗೆ ಅಂದರೆ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.

ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಒಂದು ಮಹತ್ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಉನ್ನತ ಮಟ್ಟದ ಕೊಡುಗೆಯನ್ನು ನೀಡಿರುವ, ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವುಗಳ ಸಂರಕ್ಷಣೆಗೆ ವಿಶೇಷ ಒಲವು ತೋರುತ್ತಿರುವ, ಬೆಂಬಲ ನೀಡುತ್ತಿರುವ ಮೈಸೂರು ರೇಸ್ ಕ್ಲಬ್ ಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ವಂದನೆ ಸಲ್ಲಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: