ಸುದ್ದಿ ಸಂಕ್ಷಿಪ್ತ

‘ದೇಶದ ಹಿತಚಿಂತನೆ ನಮ್ಮ ಹೊಣೆಗಾರಿಕೆ’ ವಿಚಾರಗೋಷ್ಠಿ ಡಿ.9.

ಮೈಸೂರು, ಡಿ.7 : ಸದ್ಭಾವನಾ ವೇದಿಕೆಯಿಂದ ಡಿ.9ರ ಸಂಜೆ 6 ಗಂಟೆಗೆ ದೇಶದ ಹಿತಚಿಂತನೆ ನಮ್ಮ ಹೊಣೆಗಾರಿಕೆ ಎನ್ನುವ ವಿಚಾರ ಸಂಕಿರಣವನ್ನು ಆಯೋಜಿಸಿದೆ.

ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಫಾದರ್ ಡಾ.ಡೋಮಿನಿಕ್ ವಾಸ್, ‍ಪ್ರೊ.ನೀ.ಗಿರಿ ಗೌಡ, ಪತ್ರಕರ್ತ ಟಿ.ಗುರುರಾಜ್, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು, ದಲಿತ ವೆಲ್ ಫೆರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: