ಮೈಸೂರು

ಎನ್.ಎಸ್.ಎಸ್. ಶಿಬಿರ : ಆರೋಗ್ಯ ತಪಾಸಣೆ

ಮೈಸೂರು, ಡಿ.7 : ಚಾಮರಾಜನಗರ ತಾಲ್ಲೂಕಿನ ಹಿರೇಬೇಗೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಎನ್.ಎಸ್.ಎಸ್ ಶಿಬಿರದ ಅಂಗವಾಗಿ ಜನತಾ ಮಲ್ಟಿ ಪರ್ಪಸ್ ಟ್ರಸ್ಟ್ ನೇತೃತ್ವದಲ್ಲಿ ಶ್ರೀಕಂಠೇಶ್ವರ ಡಯೋಗ್ನಸ್ಟಿಕ್ ಸೆಂಟರ್ ಮತ್ತು ಮಿಂಚುಹೆಲ್ತ್ ಕೇರ್ ಸಹಯೋಗದಲ್ಲಿ ರಕ್ತ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಎಲ್.ಮಹದೇವಪ್ಪ, ಜನತಾ ಮಲ್ಟಿ ಪರ್ಪಸ್ ಟ್ರಸ್ಟ್ ನ ಗೌರವಾಧ್ಯಕ್ಷ ಎಸ್.ಪ್ರಸಾದ್, ಅಧ್ಯಕ್ಷೆ ನಿಶಾರಾಣಿ, ಕಾರ್ಯದರ್ಶಿ ಕೆ.ಎ.ರವಿ, ಮೊದಲಾದವರು ಭಾಗವಹಿಸಿದ್ದರು. ಶಿಬಿರದಲ್ಲಿ 105ಕ್ಕೂ ಹೆಚ್ಚು ಜನ ತಪಾಸಣೆಗೊಳಗಾದರು. (ಕೆ.ಎಂ.ಆರ್)

Leave a Reply

comments

Related Articles

error: