ಮೈಸೂರು

ವರದಕ್ಷಿಣೆ ಕಿರುಕುಳ : ಮಹಿಳೆ ನೇಣಿಗೆ ಶರಣು

ಇಂಜಿನಿಯರಿಂಗ್ ಪದವಿ ಪೂರೈಸಿದ ಮಹಿಳೆಯೋರ್ವಳು ವರದಕ್ಷಿಣೆ ಕಿರುಕುಳ ತಾಳಲಾರದೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಬೋಗಾದಿ ಎರಡನೇ ಹಂತದ ನಿವಾಸಿ ಜೆ.ಅಕ್ಷತಾ ಎಂದು ಗುರುತಿಸಲಾಗಿದೆ. ಸಾಲಿಗ್ರಾಮ ನಿವಾಸಿ ಜಗದೀಶ್ ಎಂಬುವರ ಪುತ್ರಿಯಾದ ಅಕ್ಷತಾ ಬೆಂಗಳೂರಿನ ಉದ್ಯಮಿ ಪುಟ್ಟೇಗೌಡ ಎಂಬವರ ಪುತ್ರ ಮಂಜುನಾಥನನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ನೀಡಲಾಗಿತ್ತು ಎನ್ನಲಾಗಿದೆ. ದಂಪತಿಯ ನಡುವೆ ಎಂಟು ತಿಂಗಳ ಹಿಂದೆಯೇ ವೈಮನಸ್ಸು ಉಂಟಾಗಿದ್ದು, ಅಕ್ಷತಾ ತವರು ಮನೆ ಸೇರಿದ್ದರು. ಆದರೂ ಪತಿಯ ಮನೆಯಿಂದ ವರದಕ್ಷಿಣೆಗಾಗಿ ಬೇಡಿಕೆ ಬರುತ್ತಲೇ ಇದ್ದು, ಇದರಿಂದ ಮನನೊಂದ ಅಕ್ಷತಾ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ವರ್ಷದ ಮಗನನ್ನು ಅಗಲಿದ್ದಾರೆ.

ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

comments

Related Articles

error: