ದೇಶಮೈಸೂರು

ಹಳೆ ನೋಟುಗಳ ಚಲಾವಣೆ ನ.24ರವರೆಗೆ ವಿಸ್ತರಣೆ

ಹಳೆ 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನ.24ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.

ಸರ್ಕಾರಿ – ಕಚೇರಿ, ಆಸ್ಪತ್ರೆ, ಸಾರಿಗೆ ಸಂಸ್ಥೆ, ಪೆಟ್ರೋಲ್ ಬಂಕ್ ಗಳಲ್ಲಿ ಹಳೆ ನೋಟುಗಳ ಚಲಾವಣೆಗೆ 10 ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಿದೆ. ನ.14ವರೆಗೆ ಹಳೆ ನೋಟುಗಳನ್ನು ಬಳಕೆ ಮಾಡಬಹುದು ಎಂದು ನೋಟು ರದ್ದು ಮಾಡಿದ್ದ ವೇಳೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ದೇಶಾದ್ಯಂತ ವ್ಯಾಪಕ ಮನವಿಗಳು ಬಂದ ಹಿನ್ನೆಲೆಯಲ್ಲಿ ಕಾಲಾವಧಿಯನ್ನು ವಿಸ್ತರಿಸಲಾಗಿದೆ.

ನೋಟು ರದ್ದು ಆದೇಶ ಹೊರಬೀಳುತ್ತಿದ್ದಂತೆ ಬ್ಯಾಂಕ್‍ಗಳ ಮುಂದೆ ಹಗಲಿರುಳೆನ್ನದೆ ಬಿಸಿಲೆನ್ನದೆ ಜನ ಸಾಲುಗಳಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿದ್ದಾರೆ. ವಾರಾಂತ್ಯದ ದಿನಗಳಂದು ಬ್ಯಾಂಕ್‍ಗಳು ರಜೆ ಮಾಡದೆ ಕಾರ್ಯನಿರ್ವಹಿಸಿದ್ದವು.

Leave a Reply

comments

Related Articles

error: