ಮೈಸೂರು

ಬ್ಯಾಂಕ್ ವಹಿವಾಟು ವೇಳೆ ನಿರ್ಲಕ್ಷ್ಯವಹಿಸದೇ ಜಾಗೃತೆಯಿಂದಿರಿ : ಸಾರ್ವಜನಿಕರಿಗೆ ಪೊಲೀಸರ ಸಲಹೆ

ಮೈಸೂರು,ಡಿ.8:- ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಮೈಸೂರು ನಗರ ಪೊಲೀಸರು ಸಾರ್ವಜನಿಕರಿಗೆ ಕೆಲವು ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಜಯಲಕ್ಷ್ಮಿಪುರಂ ಠಾಣೆಯ ಇನ್ಸಪೆಕ್ಟರ್ ರಘು ಕೆಲವರು ನಾವು ಬ್ಯಾಂಕಿನವರು ನಿಮ್ಮ ಕ್ರೆಡಿಟ್ ಡೆಬಿಟ್ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ವಿವರ ಕೇಳಿ ನಿಮಗೆ ಮೋಸ ಮಾಡಿ ನಿಮ್ಮ ಹಣವನ್ನು ದೋಚಬಹುದು. ಬ್ಯಾಂಕಿನವರು ದೂರವಾಣಿಯ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ ಅಕಸ್ಮಾತ್ ಹಾಗೇನಾದರೂ ಇದ್ದಲ್ಲಿ ನಾನು ಬ್ಯಾಂಕ್ ಗೆ ಬಂದು ವಿವರ ನೀಡುತ್ತೇನೆ ಎಂದು ಹೇಳಿ, ಪೋನಿನಲ್ಲಿ ಯಾವುದೇ ವಿವರ ನೀಡಬೇಡಿ. ಆನ್ ಲೈನ್ ವ್ಯಾಪಾರದ ವೇಳೆ ಬ್ಯಾಂಕ್ ನಿಂದ ಓನ್ ಟೈಮ್ ಪಾಸವರ್ಡ್ ಎಸ್ ಎಂ ಎಸ್ ಮೂಲಕ ಬರಲಿದೆ. ನೀವು ಆನ್ ಲೈನ್ ವ್ಯಾಪಾರದಲ್ಲಿ ತೊಡಗಿಲ್ಲದಿದ್ದಲ್ಲಿ ಓಟಿಪಿ ನಂಬರ್ ಕೊಡಲೇಬೇಡಿ. ಆನ್ ಲೈನ್ ಬ್ಯಾಂಕಿಂಗ್ ಬಳಸುವವರು ತಮ್ಮ ಸ್ವಂತ ಕಂಪ್ಯೂಟರ್ ಬಳಸಿ ಇಂಟರ್ ನೆಟ್ ಕೆಫೆ ಬಳಸದಿರಿ. ಎಟಿಎಂ ಕಾರ್ಡ್ ನ ಪಾಸ್ ವರ್ಡ್ ಗೌಪ್ಯವಾಗಿಡಿ. ಯಾರಿಗೂ ಕೊಡದಿರಿ. ಎಟಿಎಂ ಡೆಬಿಟ್ ಕಾರ್ಡ್ ಗಳು ಹೋಟೆಲ್, ಪೆಟ್ರೋಲ್ ಬಂಕ್ ಮಾಲ್ ಗಳಲ್ಲಿ ಅಂಗಡಿಗಳಲ್ಲಿ ಬಳಸುವ ವೇಳೆ ಎಚ್ಚರಿಕೆಯಿರಲಿ. ಎಟಿಎಂ ಕೌಂಟರ್ ನಲ್ಲಿ ಹಣ ಡ್ರಾ ಮಾಡುವಾಗ ಬೇರೆಯವರ ಸಹಾಯವನ್ನು ಪಡೆಯಬೇಡಿ. ಡ್ರಾ ಮಾಡುವಾಗ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಳ್ಳಿ. ದೊಡ್ಡ ಮೊತ್ತದ ಹಣ ಡ್ರಾ ಮಾಡುವಾಗ ಅಕ್ಕಪಕ್ಕ ಇರುವ ಸಂಶಯಾಸ್ಪದ ವ್ಯಕ್ತಿಗಳನ್ನು ಗಮನಿಸಿ. ಬ್ಯಾಂಕ್ ವಹಿವಾಟು ವೇಳೆ ನಿರ್ಲಕ್ಷ್ಯವಹಿಸದೇ ಜಾಗೃತೆಯಿಂದಿರಿ ಎಂದರು.

ಈ ಸಂದರ್ಭ ಕೆ.ಆರ್.ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಗಳು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: