ಸುದ್ದಿ ಸಂಕ್ಷಿಪ್ತ

ಗಂಗೋತ್ರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ವಿದ್ಯಾಶಾಲೆಯಲ್ಲಿ ನ.14ರಂದು ಮಕ್ಕಳ ದಿನವನ್ನು ಆಚರಿಸಲಾಯಿತು.

ಶಾಲೆಯ ಸಂಸ್ಥಾಪನಾ ಅಧ್ಯಕ್ಷರಾದ ಟಿ. ರಂಗಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಕನ್ಯ, ಮುಖ್ಯೋಪಾಧ್ಯಾಯಿನಿಯರಾದ ಕಾಂತಿನಾಯಕ್, ಝರಿನಾ ಬಾಬೂಲ್ ಉಪಸ್ಥಿತರಿದ್ದರು.

ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಭಾರತದಲ್ಲಿ ಆಚರಿಸಲಾಗುತ್ತದೆ ಎಂದು ಮಕ್ಕಳಿಗೆ ತಿಳಿಸಿಕೊಡಲಾಯಿತು. ಇದೇ ಸಂದರ್ಭ ಸ್ವಚ್ಛ ಭಾರತ ಅಭಿಯಾನದ ಕುರಿತು ತಿಳಿಸಿಕೊಡಲಾಯಿತು.

ಮಕ್ಕಳು ಹೂದೋಟದ ಹೂಗಳಂತೆ ಬಣ್ಣಬಣ್ಣದ ವೇಷಭೂಷಣ ತೊಟ್ಟು ಸಂಭ್ರಮಪಟ್ಟಿದ್ದು ವಿಶೇಷವಾಗಿತ್ತು.

Leave a Reply

comments

Related Articles

error: