ಕರ್ನಾಟಕಪ್ರಮುಖ ಸುದ್ದಿ

ಪತ್ರಕರ್ತ ರವಿ ಬೆಳಗೆರೆ ಬಂಧನ

ಬೆಂಗಳೂರು,ಡಿ.8-ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಸುಪಾರಿ ನೀಡಿರುವ ಆರೋಪದ ಮೇಲೆ ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ಸಿಸಿಬಿ ಪೊಲೀಸರು ಬೆಳಗೆರೆ ಅವರನ್ನು ಬಂಧಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ವಿಚಾರಣೆ ವೇಳೆ ಬಂಧಿತನಾಗಿದ್ದ ಭೀಮಾ ತೀರದ ಶಾರ್ಪ್ ಶೂಟರ್ ರವಿ ಬೆಳಗೆರೆಯಿಂದ ಕೊಲೆ ಸುಪಾರಿ ಪಡೆದಿದ್ದಾಗಿ ಬಾಯ್ಬಿಟ್ಟಿದ್ದಾನೆ. ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿ ಸಿಸಿಬಿ ಪೊಲೀಸರ ಮುಂದೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾನೆ.

ರವಿ ಬೆಳಗೆರೆ ಎರಡನೇ ಪತ್ನಿ ಯಶೋಮತಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರೂ. ಕೊಟ್ಟಿದ್ದರು ಎನ್ನಲಾಗಿದೆ. (ವರದಿ-ಎಂ.ಎನ್)

Leave a Reply

comments

Related Articles

error: