ಮೈಸೂರು

ಡಿ.10ರಂದು ನೃತ್ಯ ಸಂಸ್ಕೃತಿ ನಾಟ್ಯಶಾಲೆ ಉದ್ಘಾಟನೆ

ಮೈಸೂರು, ಡಿ.8 : ಜೆ.ಪಿ.ನಗರದ ಓಂಕಾರ ನಗರದಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ನೃತ್ಯ ಸಂಸ್ಕೃತಿ ನಾಟ್ಯಶಾಲೆ ಡಿ.10ರಂದು ಉದ್ಘಾಟನೆಗೊಳ್ಳಲಿದೆ ಎಂದು ಶಾಲೆಯ ಮುಖ್ಯಸ್ಥರಾದ ಬಿ.ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲಾಮಂದಿರದಲ್ಲಿ ಅಂದು ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕಣಗಾಲ್ ನೃತ್ಯಾಲಯದ ವಿದ್ವಾನ್ ರಾಮು ಕಣಗಾಲ್ ಶಾಲೆ ಉದ್ಘಾಟಿಸುವರು, ಅವಧೂತ ದತ್ತಪೀಠದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ನಾದ ವಿದ್ಯಾಲಯದ ಮಿದುಷಿ ಮಿತ್ರ ನವೀನ್ ಅಧ್ಯಕ್ಷತೆ ವಹಿಸುವರು, ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಡಾ.ಭಾನುಪ್ರಕಾಶ್ ಶರ್ಮ, ಡಾ.ಜಿ.ವಿ.ಶೇಷಾದ್ರಿ, ಶ್ರೀರಂಗಪಟ್ಟಣ ಪುರಸಭೆ ಸದಸ್ಯೆ ಕಾವೇರಮ್ಮ ಶೇಷಾದ್ರಿ ಭಾಗವಹಿಸುವರು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಸಂಸ್ಥಾಪಕಿ ಚಾಂದಿನಿ ಮನೋಜ್, ವ್ಯವಸ್ಥಾಪಕ ಮನೋಜ್ ವಿ.ಭರಣಿ, ವಿಕ್ರಂ ಅಯ್ಯಂಗಾರ್, ಜಯಸಿಂಹ ಶ್ರೀಧರ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: