ಸುದ್ದಿ ಸಂಕ್ಷಿಪ್ತ

ರೇಸ್ ಕೋರ್ಸ್ ತೆರವು ನಿರ್ಧಾರ: ಸರ್ಕಾರಕ್ಕೆ ಅಭಿನಂದನೆ

ಮೈಸೂರಿನ ಕುರುಬಾರಹಳ್ಳಿಯಲ್ಲಿ ಚಟುವಟಿಕೆ ನಡೆಸುತ್ತಿದ್ದ ರೇಸ್ ಕೋರ್ಸ್ ತೆರವುಗೊಳಿಸಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು “ಕರ್ನಾಟಕ ಕನ್ನಡ ವೇದಿಕೆ” ಅಭಿನಂದಿಸಿದೆ.

ಕುರುಬಾರಹಳ್ಳಿ ಸರ್ವೆ ನಂಬರ್ 4 ಮತ್ತು 74 ರ 139.39 ಎಕರೆ ಸರ್ಕಾರಿ ಜಾಗದಲ್ಲಿ ರೇಸ್ ಕೋರ್ಸ್ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದರೂ ಸರ್ಕಾರಕ್ಕೆ ಯಾವುದೇ ಬಾಡಿಗೆ ಪಾವತಿಸದೆ ಅನಧಿಕೃತವಾಗಿ ಜಯಚಾಮರಾಜೇಂದ್ರ ಗಾಲ್ಫ್ ಕ್ಲಬ್ (JWGC)ಗೆ ಉಪ ಗುತ್ತಿಗೆ ನೀಡಿ ಕೋಟ್ಯಂತರ ರೂ. ಹಣ ಪಡೆಯುತ್ತಿದ್ದುದರ ವಿರುದ್ಧ ಕರ್ನಾಟಕ ಕನ್ನಡ ವೇದಿಕೆ ಪ್ರತಿಭಟನೆ ನಡಸಿತ್ತು. ಈ ಜಾಗವನ್ನು ವಶಪಡಿಸಿಕೊಂಡು ಸಸ್ಯಶಾಸ್ತ್ರೀಯ ಉದ್ಯಾನವನವಾಗಿ ಪರಿವರ್ತಿಸಬೇಕು ಅಥವಾ ಮೃಗಾಲಯವನ್ನು ವಿಸ್ತರಿಸಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು ಎಂಬುದು ವೇದಿಕೆಯ ಬೇಡಿಕೆಯಾಗಿತ್ತು.

ವೇದಿಕೆಯ ಮನವಿಗೆ ಸ್ಪಂದಿಸಿದ್ದ ನಿಕಟಪೂರ್ವ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿ ಜಾಗ ವಶಕ್ಕೆ ತೆಗೆದುಕೊಳ್ಳಲು ಕೋರಿದ ಪರಿಣಾಮ ಲೋಕೋಪಯೋಗಿ ಇಲಾಖೆ ರೇಸ್ ಕ್ಲಬ್ ಗೆ ನೋಟಿಸ್ ನೀಡಿದ್ದು, 10 ದಿನದೊಳಗಾಗಿ ಜಾಗ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದೆ. ದಿಟ್ಟ ನಿರ್ಧಾರ ಪ್ರಕಟಿಸಿದ ಸರ್ಕಾರಕ್ಕೆ, ಅಧಿಕಾರಿಗಳಿಗೆ ಹಾಗೂ ಮಾಧ್ಯಮ ವೃಂದಕ್ಕೆ ವೇದಿಕೆ ಅಭಿನಂದನೆ ಸಲ್ಲಿಸಿದೆ.

Leave a Reply

comments

Related Articles

error: