ಪ್ರಮುಖ ಸುದ್ದಿಮೈಸೂರು

ಬೈಕ್ ಗೆ ಗುದ್ದಿದ ಬೊಲೆರೋ : ಸ್ಥಳದಲ್ಲೇ ಇಬ್ಬರ ದುರ್ಮರಣ; ಓರ್ವ ಗಂಭೀರ

ಗಾಯಾಳು ಯಶ್ವಂತ್

ಮೈಸೂರು.ಡಿ.8:- ಕೆ.ಆರ್.ಎಸ್. ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು  ಸ್ಥಳದಲ್ಲೇ ಸಾವನ್ನಪ್ಪಿದ್ದು,ಇನ್ನೋರ್ವ ಸವಾರ ಗಂಭೀರ ಗಾಯಗೊಂಡ ಘಟನೆ ಮೈಸೂರು ಕೆಆರ್ ಎಸ್ ರಸ್ತೆಯ ಆನಂದೂರು ಬಳಿ ನಡೆದಿದೆ.

ಮೃತರನ್ನು ಕುಂಬಾರಗೇರಿ ರವಿಕುಮಾರ್ ಪುತ್ರ ಗಿರೀಶ್  (22) ಕುರುಬಗೇರಿ ಶಿವಣ್ಣ ಪುತ್ರ  ಜೀವನ್ (16)  ಹಾಗೂ ಗಂಭೀರ ಗಾಯಗೊಂಡಾತ ಯಶ್ವಂತ್ ಎಂದು ಗುರುತಿಸಲಾಗಿದೆ. ಬುಲೇರೋ ವಾಹನ ಟಯರ್ ಪಂಚರ್ ಆದ ಹಿನ್ನಲೆಯಲ್ಲಿ  ಬೈಕ್ ಗೆ ಹಿಂಬದಿಯಿಂದ ಬೊಲೆರೋ ವಾಹನ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮೃತದೇಹವನ್ನು  ಮೈಸೂರು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದ್ದು, ಗಾಯಗೊಂಡವನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೆ.ಆರ್.ಎಸ್.ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: