ಮೈಸೂರು

ಕಾವೇರಿ ನದಿಗೆ ರಾಸಾಯನಿಕ ಮಿಶ್ರಿತ ನೀರು ಸೇರ್ಪಡೆ : ಕಲುಷಿತ ನೀರನ್ನು ನದಿ ಸೇರದಂತೆ ನೋಡಿಕೊಳ್ಳಲು ಸ್ಥಳೀಯರ ಆಗ್ರಹ

ಮೈಸೂರು,ಡಿ.8:- ಕಾವೇರಿ ನದಿಗೆ ರಾಸಾಯನಿಕ ಮಿಶ್ರಿತ ನೀರು ಸೇರ್ಪಡೆಗೊಂಡಿದ್ದು, ಮೈಸೂರಿನಲ್ಲಿ ಕಾವೇರಿ ನೀರು ಕುಡಿಯಲು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾವೇರಿ ನದಗೆ ವಿಷಯುಕ್ತ ನೀರು ಬಂದು ಸೇರುತ್ತಿದೆ.  ಪರಿಣಾಮ ನದಿಯಲ್ಲಿ ಹರಿಯುತ್ತಿರುವ ನೀರಿನ ಬಣ್ಣವೇ ಬದಲಾಗಿದೆ.  ಕಾವೇರಿ ಕೆಂಪು ಮಿಶ್ರಿತ ಬಣ್ಣದಲ್ಲಿ ಹರಿಯುತ್ತಿದ್ದಾಳೆ. ತೋಟ, ಗದ್ದೆಗಳು ತೊರೆಗಳ ಮೂಲಕ ಕಾವೇರಿ ನದಿಗೆ ವಿಷಕಾರಿ ನೀರು ಸೇರುತ್ತಿದೆ.  ಕಾರ್ಖಾನೆಯ ತ್ಯಾಜ್ಯ ಹಾಗೂ ಇತರೆ ಪದಾರ್ಥಗಳಿಂದ ನೀರಿನ ಬಣ್ಣ ಬದಲಾಗಿದೆ. ಮೈಸೂರಿನ ಹೊರವಲಯದ  ನಗುವಿನಹಳ್ಳಿ ಗ್ರಾಮದ ಬಳಿ ಕಾವೇರಿ ನದಿಯನ್ನು ಕಲುಷಿತ ನೀರು ಸೇರುತ್ತಿದೆ. ಘಟನೆ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.  ಕಲುಷಿತ ನೀರನ್ನು ನದಿ ಸೇರದಂತೆ ನೋಡಿಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವುದಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: