ಮೈಸೂರುಸುದ್ದಿ ಸಂಕ್ಷಿಪ್ತ

ಪರಿಸರ ಸಂರಕ್ಷಣೆ ಜಾಗೃತಿಯಿಂದ ಮಾತ್ರ ಪ್ರಕೃತಿಯ ಉಳಿವು: ಟಿ. ಮಹದೇವಸ್ವಾಮಿ

“ಪ್ರಕೃತಿ ಸೌಂದರ್ಯ ಸವಿಯಲು ಇಷ್ಟಪಡುವ ನಾವು ಪರಿಸರವನ್ನು ಕಾಪಾಡುವತ್ತ ಗಮನ ತೋರುತ್ತಿಲ್ಲ. ಪ್ರಕೃತಿ ನಮ್ಮೆಲ್ಲರಿಗೂ ಆಶ್ರಯತಾಣವಾಗಿದ್ದು, ಪರಿಸರ ಕಾಳಜಿಯಿಂದ ಮಾತ್ರ ಮುಂದಿನ ಆರೋಗ್ಯಕರ ಪರಿಸರದಲ್ಲಿ ಬದುಕಲು ಸಾಧ್ಯ. ಆದ್ದರಿಂದ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಬೇಕಾಗಿದೆ ಎಂದು ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಮಹದೇವಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆ ವತಿಯಿಂದ ಆಲನಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ 38ನೇ ವಾರದ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದ್ದು ಪ್ರಕೃತಿಯಯಲ್ಲಿ ವಿಪರೀತ ಏರುಪೇರು ಉಂಟಾಗುತ್ತಿದೆ. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಪರಿಸರದ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ವೇದಿಕೆಯ ಕಾರ್ಯದರ್ಶಿ ಮ.ನ. ಲತಾ ಮೋಹನ್ ಅವರು ಮಾತನಾಡಿ, ಸುಡುಬಿಸಿಲಿನ ಬೇಗೆ ತಣಿಯದಿರಲು ಇಂದು ಪರಿಸರದ ಬಗ್ಗೆ ನಾವು ವಹಿಸಿರುವ ನಿರ್ಲಕ್ಷ್ಯವೇ ಕಾರಣವಾಗಿದೆ. ಪಟಾಕಿ ಸುಡುವುದನ್ನು ನಮ್ಮ ಜನತೆ ಆದಷ್ಟು ಕಡಿಮೆ ಮಾಡಿರುವುದು ಕೂಡ ಪರಿಸರದ ಬಗ್ಗೆ ನೀಡಿದ ತಿಳುವಳಿಕೆಯಿಂದ. ಈ ನಿಟ್ಟಿನಲ್ಲಿ ಸಂಸ್ಥೆಯೂ ಅಳಿಲು ಸೇವೆ ಸಲ್ಲಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಂದೇ ಮಾತರಂ ಫೌಂಡೇಷನ್ ನ ಮಹೇಶ್ ಕಾಮತ್ ಅವರು ಮೊದಲು ಪ್ಲಾಸ್ಟಕ್ ಮುಕ್ತ ವಲಯವಾಗಿ ನಮ್ಮ ಸುತ್ತಲ ಪರಿಸರ ಮಾರ್ಪಡಬೇಕಾಗಿದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕಾದರೆ ಮೊದಲು ನಮಗೆ ಪರಿಸರದ ಬಗ್ಗೆ ಜಾಗೃತಿ ಮೂಡಬೇಕಾದ ಅಗತ್ಯ ಬಹಳಷ್ಟಿದೆ ಎಂದು.

ಗ್ರಾ.ಪಂ. ಸದಸ್ಯರಾದ ಲಕ್ಷ್ಮಿ, ಮುಖಂಡರಾದ ರಾಜು, ಮುಖ್ಯೋಪಾಧ್ಯಾಯರಾದ ಕಮಲಾಕ್ಷಿ, ಅಂಗನವಾಡಿ ಹಾಗೂ ಶಾಲಾ ಶಿಕ್ಷಕರು, ವೇದಿಕೆಯ ಉಪಾಧ್ಯಕ್ಷರಾದ ಪ್ರೊ. ಜಗದೀಶ್, ಪದಾಧಿಕಾರಿಗಳಾದ ಚಂದ್ರಹಾಸ, ನಾಗರಾಜಪ್ಪ, ಯೋಗೀಶ್, ಟಿ.ಎಲ್. ಲೋಕೇಶ್, ಮಹೇಶ್, ಪ್ರಶಾಂತ್, ಹನುಮೇಗೌಡ, ಕೇಶವಮೂರ್ತಿ, ದೇವರಾಜು, ಮಾಯಿಗಶೆಟ್ಟಿ ಹಾಗೂ ಊರಿನ ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

comments

Related Articles

error: