ಮೈಸೂರು

ರಾಜ್ಯಮಟ್ಟದ ಪದವಿ ಪೂರ್ವ ಹಾಕಿ ಪಂದ್ಯಾವಳಿ: ಮೈಸೂರು ಜಿಲ್ಲಾ ಬಾಲಕಿಯರ ತಂಡಕ್ಕೆ ಪ್ರಥಮ ಸ್ಥಾನ

ಮೈಸೂರು,ಡಿ.8-ರಾಜ್ಯಮಟ್ಟದ ಪದವಿಪೂರ್ವ ಹಾಕಿ ಪಂದ್ಯಾವಳಿಯಲ್ಲಿ ಮೈಸೂರು ಜಿಲ್ಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮಂಗಳೂರಿನ ದಕ್ಷಿಣ ಕನ್ನಡ ಕಬಕ ಪುತ್ತೂರಿನ ಪದವಿಪೂರ್ವ ಶಿಕ್ಷಣ ಇಲಾಖೆ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಸಂತ ಫಿಲೋಮಿನಾ ಪ.ಪೂ ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಂದ್ಯಾವಳಿಯಲ್ಲಿ ಮೈಸೂರು ಜಿಲ್ಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿದೆ.

ಫಲಿತಾಂಶ: ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಮೈಸೂರು ತಂಡ ಶಿವಮೊಗ್ಗ ತಂಡವನ್ನು 11-0, ಫ್ರೀ ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಮೈಸೂರು ತಂಡ ಬೆಳಗಾವಿ ತಂಡವನ್ನು 6-0, ಸೆಮಿ ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಮೈಸೂರು ತಂಡ ಬೆಂಗಳೂರು ದಕ್ಷಿಣ ತಂಡವನ್ನು 7-0, ಸೆಮಿ ಫೈನಲ್ ಪಂದ್ಯದಲ್ಲಿ ಉಡುಪಿ ತಂಡವನ್ನು 6-0, ಫೈನಲ್ಸ್ ಪಂದ್ಯದಲ್ಲಿ ಮೈಸೂರು ತಂಡ ಕೊಡಗು ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮೈಸೂರು ತಂಡದ ಆಟಗಾರರೊಂದಿಗೆ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಲುವಯ್ಯ, ಮಂಚೇಗೌಡನ ಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಅಧೀಕ್ಷಕರಾದ ಎಂ.ಭಾರತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ವಿ.ಆರ್. ಶ್ಯಾಮಲ, ಹೆಬಾಳು ಸರ್ಕಾರಿ ಪ.ಪೂ ಕಾಲೇಜಿನ ಎನ್.ವಿ.ಶಶಿಧರ್, ಹುಣಸೂರು ರತ್ನಪುರಿಯ ಸರ್ಕಾರಿ ಪ.ಪೂ ಕಾಲೇಜಿನ ವಿ.ನಾಗರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಉಪಾನ್ಯಾಸಕರಾದ ಲಕ್ಷ್ಮೀನಾರಾಯಣ್, ನಂಜನಗೂಡು ಸರ್ಕಾರಿ ಪ.ಪೂ ಕಾಲೇಜು ಪ್ರಾಂಶುಪಾಲರಾದ ಎಸ್.ಎಲ್. ಬಾಲಸುಬ್ರಮಣ್ಯಂ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಥಮ ಧರ್ಜೆ ಸಹಾಯಕರು ಹಾಗೂ ಕ್ರೀಡಾ ಸಂಚಾಲಕ ಸಂತೋಷ್ ಅವರನ್ನು ಚಿತ್ರದಲ್ಲಿ ಕಾಣಬಹುದು. (ವರದಿ-ಎಚ್.ಎನ್, ಎಂ.ಎನ್)

 

 

Leave a Reply

comments

Related Articles

error: