ಸುದ್ದಿ ಸಂಕ್ಷಿಪ್ತ

ಐದು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರಿನ ಮಾತಾ ಅಮೃತಾನಂದಮಯಿ ಮಠ, ರೂಪನಗರ, ಸೆಂಟ್ರಲ್ ಅವೆನ್ಯೂ ರಸ್ತೆ, 22ನೇ ಕ್ರಾಸ್ ನಲ್ಲಿರುವ ಅಮೃತಕೃಪ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಕೊಚ್ಚಿನ ಎಐಎಂಎಸ್ ಆಸ್ಪತ್ರೆಯ ಟೆಲಿಮೆಡಿಸಿನ್ ಸೌಲಭ್ಯದೊಂದಿಗೆ ಐದು ದಿನಗಳ ಕಾಲ ವಿವಿಧ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಉಚಿತ ವೈದ್ಯಕೀಯ ತಪಾಸಣೆ, ಇಸಿಜಿ, ರಕ್ತಪರೀಕ್ಷೆ, ಎಕ್ಸರೆ ಹಾಗೂ ಔಷಧಿ ವಿತರಣೆ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2598822 ಸಂಪರ್ಕಿಸಬಹುದು. ಶಿಬಿರದ ವಿವರ ಕೆಳಕಂಡಂತಿದೆ.

ದಿನಾಂಕ ಸಮಯ ಸ್ಥಳ ಶಿಬಿರದ ಸಮಯ
15.11.2016ನೇ ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ, ಬೆಟ್ಟದಬೀಡು, ಮೈಸೂರು ಜಿಲ್ಲೆ ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸ್ತ್ರೀ ರೋಗ ಮತ್ತು ಪ್ರಸೂತಿ ಚಿಕಿತ್ಸೆ ಜನರಲ್ ಮೆಡಿಸಿನ್
16.11.2016ನೇ ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕೆರೆಯೂರು, ಎಚ್.ಡಿ. ಕೋಟೆ, ಮೈಸೂರು ಜಿಲ್ಲೆ ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸ್ತ್ರೀ ರೋಗ ಮತ್ತು ಪ್ರಸೂತಿ ಚಿಕಿತ್ಸೆ ಜನರಲ್ ಮೆಡಿಸಿನ್
17.11.2016ನೇ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಹನಗೋಡು, ಹುಣಸೂರು, ಮೈಸೂರು ಜಿಲ್ಲೆ ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸ್ತ್ರೀ ರೋಗ ಮತ್ತು ಪ್ರಸೂತಿ ಚಿಕಿತ್ಸೆ ಜನರಲ್ ಮೆಡಿಸಿನ್
18.11.2016ನೇ ಶುಕ್ರವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಸ್ಥಳ: ಓಲ್ಡ್ ಪ್ರೈಮರಿ ಸ್ಕೂಲ್, ಜೆಟ್ಟಿಹುಂಡಿ, ಗಿರಿಜಾಂಬ ಶಶಿಕುಮಾರ್ ಲಯನ್ಸ್ ಕ್ಲಬ್ ಆಫ್ ಮೈಸೂರು – ಇವರ ಸಹಯೋಗದೊಂದಿಗೆ ತಿಲಕ್ ನಗರ, ಮೈಸೂರು ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸ್ತ್ರೀ ರೋಗ ಮತ್ತು ಪ್ರಸೂತಿ ಚಿಕಿತ್ಸೆ ಜನರಲ್ ಮೆಡಿಸಿನ್
19.11.2016ನೇ ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಅಮೃತ ಕೃಪ ಆಸ್ಪತ್ರೆ, ಸೆಂಟ್ರಲ್ ಅವೆನ್ಯೂ ರಸ್ತೆ, 22ನೇ ಕ್ರಾಸ್, ಬೋಗಾದಿ ಪೋಸ್ಟ್, ಮೈಸೂರು ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸ್ತ್ರೀ ರೋಗ ಮತ್ತು ಪ್ರಸೂತಿ ಚಿಕಿತ್ಸೆ ಜನರಲ್ ಮೆಡಿಸಿನ್

Leave a Reply

comments

Related Articles

error: