ಸುದ್ದಿ ಸಂಕ್ಷಿಪ್ತ

ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು, ಡಿ.9:-  ಮೈಸೂರು ಜಿಲ್ಲೆ ಡಾ.ಬಿ.ಆರ್.ಅಂಬೇಡ್ಕರ್  ಅಭಿವೃದ್ಧಿ ನಿಗಮದ ವತಿಯಿಂದ 2017-18ನೇ ಸಾಲಿನ ಕೌಶಲ್ಯಾಭಿವೃದ್ಧಿ ತರಬೇತಿಗೆ ಪರಿಶಿಷ್ಟಜಾತಿಯ ಅರ್ಹ ಫಲಾಪೇಕ್ಷಿಗಳಿಂದ   ಅರ್ಜಿ  ಆಹ್ವಾನಿಸಲಾಗಿದೆ.
ಅರ್ಜಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ  ಕಛೇರಿ, ನಂ. 9/ಎ, ಎಸ್.ಬಿ.ಎಂ. ಜೋನಲ್ ಕಚೇರಿ ಕಟ್ಟಡದ 3ನೇ ಮಹಡಿ, ಸಾಹುಕಾರ್ ಚನ್ನಯ್ಯ ರಸ್ತೆ, ಚಾಮರಾಜಮೊಹಲ್ಲಾ, ಸರಸ್ವತಿಪುಂ, ಮೈಸೂರು. ಹಾಗೂ ಆಯಾ ತಾಲೂಕು ಮಟ್ಟದಲ್ಲಿ ನಿಗಮದ ಅಭಿವೃದ್ಧಿ ಅಧಿಕಾರಿಗಳ ಮೂಲಕ ಪಡೆದು    ಡಿಸೆಂಬರ್ 20 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಮೈಸೂರು ಜಿಲ್ಲೆ ಡಾ.ಬಿ.ಆರ್.ಅಂಬೇಡ್ಕರ್  ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ : ದೂರವಾಣಿ ಸಂಖ್ಯೆ: 0821-2332480, ಇ-ಮೆಲ್ ವಿಳಾಸ [email protected] ವನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: