ಸುದ್ದಿ ಸಂಕ್ಷಿಪ್ತ

ಸೂಫಿ ಸಂಸ್ಕೃತಿ ಕುರಿತು ಚಿಂತನ ಕಾರ್ಯಕ್ರಮ

ಪ್ರೊ. ಕೆ. ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ತು ಮತ್ತು ಕರ್ನಾಟಕ ವಿಚಾರ ವೇದಿಕೆ – ಇವರ ಸಂಯುಕ್ತಾಶ್ರಯದಲ್ಲಿ “ಸೂಫಿ ಸಂಸ್ಕೃತಿ – ಎಲ್ಲಿ ಏಕೆ ಹೇಗೆ ಎಂತು – ಒಂದು ಚಿಂತನೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನ.18 ರಂದು ಸಂಜೆ 5.30ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸುಪ್ರಸಿದ್ಧ ವಿದ್ವಾಂಸ ಡಾ.ಮಳಲಿ ವಸಂತ ಕುಮಾರ್ ಅವರು ಉದ್ಘಾಟನೆ ಮಾಡುವರು.

ಮಂಗಳೂರು ಮತ್ತು ಗೋವಾ ವಿವಿಗಳ ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ. ಷೇಕ್ ಅಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮೆಸ್ಕೊ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳು ಹಾಗೂ ನಿವೃತ್ತ ಆಂಗ್ಲ ಪ್ರಾಧ್ಯಾಪಕರಾದ ಪ್ರೊ. ಶಬ್ಬೀರ್ ಮುಸ್ತಾಫ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

Leave a Reply

comments

Related Articles

error: