ಮೈಸೂರು

ಗುಜರಾತ್ ವಿಧಾನಸಭೆ ಚುನಾವಣೆಯ ಗೆಲುವಿಗಾಗಿ 101ತೆಂಗಿನಕಾಯಿ ಒಡೆದ ಕಾರ್ಯಕರ್ತರು

ಮೈಸೂರು,ಡಿ.9-ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ಪ್ರಾರಂಭವಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲೆಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು 101 ತೆಂಗಿನಕಾಯಿ ಒಡೆದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಸ್ಲಂ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಜಿ.ಗಿರಿಧರ್, ಎನ್.ಆರ್.ಕ್ಷೇತ್ರದ ಸ್ಲಂ ಮೋರ್ಚಾ ಉಪಾಧ್ಯಕ್ಷ ಜಗದೀಶ್, ಜೋಗಿ ಮಂಜು, ವಿಕ್ರಮ್, ಮಂಜುನಾಥ್, ಮಣಿರತ್ನಂ, ಎನ್.ಸುರೇಂದ್ರ, ಬಿ.ಕುಮಾರ್, ಪದ್ಮನಾಭ, ಸಿದ್ದರಾಜು, ಸಂದೇಶ್, ಯೋಗೇಶ್, ಆನಂದ್ ಇತರರು ಹಾಜರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

 

 

 

Leave a Reply

comments

Related Articles

error: