ದೇಶ

ದೇಶದ ಮೊದಲ ಮಹಿಳಾ ಛಾಯಾಗ್ರಾಹಕಿ ಹೋಮಿ ವ್ಯಾರ್ವಾಲಾ ಜನ್ಮದಿನಕ್ಕೆ ಗೂಗಲ್ ನಿಂದ ಡೂಡಲ್ ಸಮರ್ಪಣೆ

ದೇಶ(ನವದೆಹಲಿ)ಡಿ.9:- ದೇಶದ ಮೊದಲ ಮಹಿಳಾ ಛಾಯಾಗ್ರಾಹಕಿ ಹೋಮಿ ವ್ಯಾರ್ವಾಲಾ ಅವರ 104ನೇ ಜನ್ಮದಿನದ ಪ್ರಯುಕ್ತ ಗೂಗಲ್ ಅವರನ್ನು ಸ್ಮರಿಸಿದ್ದು ಡೂಡಲ್ ಅರ್ಪಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದೆ.

ಗೂಗಲ್ ಅವರನ್ನು ‘ಫಸ್ಟ್ ಲೇಡಿ ಆಫ್ ದಿ ಲೆನ್ಸ್’ ಗೌರವಿಸಿದೆ. ಹೋಮಿ ವ್ಯಾರ್ವಾಲಾ ರ ಜನ್ಮವು 1913ರ ಡಿಸೆಂಬರ್ ಗುಜರಾತ್ ನ ನವಸಾರಿಯಲ್ಲಿ ಮಧ್ಯಮವರ್ಗದ ಕುಟುಂಬದಲ್ಲಾಯಿತು. ಅವರ ತಂದೆ ಫಾರ್ಸಿ ಉರ್ದು ಥಿಯೇಟರ್ ನಲ್ಲಿ ನಟರಾಗಿದ್ದರು. ಅವರ ಪಾಲನೆ ಪೋಷಣೆಯು ಅವರ ಪಾಲನೆ ಪೋಷಣೆಯು ಮುಂಬೈನಲ್ಲಾಗಿದ್ದು, ಛಾಯಾಗ್ರಹಣದತ್ತ ಒಲವು ಹೊಂದಿದ್ದ  ಇವರು ಮೊದಲ  ಛಾಯಾಗ್ರಾಹಣ ಕಲಿಕೆಯನ್ನು ಮಿತ್ರ ಮನೇಕ್ಷಾ ವ್ಯಾರ್ವಾಲಾ ಬಳಿ ನಂತರ ಜೆಜೆ ಸ್ಕೂಲ್ ಆಫ್ ಆರ್ಟ್ ನಲ್ಲಿ ಆರಂಭಿಸಿದರು. ಇವರ ಬಳಿಕ ಮಹಿಳೆಯರು ಛಾಯಾಗ್ರಹಣ ಕ್ಷೇತ್ರದಲ್ಲಿ ಗುರುತಿಸಿಕೊಂಡರು. 2011ರಲ್ಲಿ ಇವರಿಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. (ಎಸ್.ಎಚ್)

Leave a Reply

comments

Related Articles

error: