ಮೈಸೂರು

ಮೈಸೂರಲ್ಲಿ ಯುವಜನೋತ್ಸವಕ್ಕೆ ಸಿದ್ಧತೆ

ಜಿಲ್ಲಾಧಿಕಾರಿ ಡಿ.ರಂದೀಪ್ ಹಾಗೂ ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಡಿ.16ರಿಂದ 3 ದಿನ ರಾಜ್ಯ ಯುವಜನೋತ್ಸವ ಆಚರಿಸುವ ಬಗ್ಗೆ ತಾತ್ಕಾಲಿಕ ಸಮಯ ನಿಗದಿಪಡಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮಾತನಾಡಿ, ಯುವಜನೋತ್ಸವದಲ್ಲಿ 1,750 ಯುವ ಕಲಾವಿದರು ಮತ್ತು 200 ಮಂದಿ ತೀರ್ಪುಗಾರರು ಭಾಗವಹಿಸುತ್ತಾರೆ. ಹಾಗಾಗಿ ಯುವ ಸನಲೀಕರಣ ಇಲಾಖೆಯಿಂದ 20 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮದ ಆಯೋಜನೆಗಾಗಿ ವಿವಿಧ ಸಮಿತಿ ರಚನೆ ಮಾಡಿ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ರಾಜ್ಯ ಯುವಜನೋತ್ಸವ ಆಚರಿಸುವ ಅವಕಾಶ ಮೂರು-ನಾಲ್ಕು ಬಾರಿ ದೊರೆತಿದೆ. ಮೈಸೂರಿಗೆ ಈವರೆಗೂ ಅವಕಾಶ ಸಿಕ್ಕಿರಲಿಲ್ಲ. ಕಳೆದ 3 ವರ್ಷಗಳಿಂದ ಪ್ರಯತ್ನ ಮಾಡಿದ ಕಾರಣ ಈ ವರ್ಷ ನಮಗೆ ಅವಕಾಶ ದೊರೆತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ, ನೆಹರೂ ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ನಟರಾಜ್, ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್. ಬಾಲಾಜಿ, ಕಲಾನಿಧಿ ಯುವಕರ ಸಂಘದ ಕಿರಣ್, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ, ಪೊಲೀಶ್ ಅಧಿಕಾರಿ ರಾಜಶೇಖರ್ ಹಾಗೂ ಶೈಲೇಂದ್ರ ಇದ್ದರು.

Leave a Reply

comments

Related Articles

error: