ಪ್ರಮುಖ ಸುದ್ದಿಮೈಸೂರು

ಫೇಸ್‍ಬುಕ್‍ ಪರಿಚಯ: 11.74 ಲಕ್ಷ ರು. ವಂಚನೆ

ಕ್ಯಾನ್ಸರ್ ಗುಣಪಡಿಸುವ ಬೀಜ ಸಿಗುತ್ತದೆ ಎಂದು ನಂಬಿ ಮೈಸೂರು ಬೋಗಾದಿಯ ನಿವಾಸಿ ವಿಶ್ವೇಶ್ವರ ಹೆಗಡೆ ಎಂಬವರು 11.74 ಲಕ್ಷ ರು. ಕಳೆದುಕೊಂಡಿದ್ದಾರೆ.

ಆರು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಜೆಸ್ಸಿಕಾ ಎಂಬ ಮಹಿಳೆಯ ಪರಿಚಯವಾಗಿದ್ದು, ನೈಜಿರಿಯಾದಲ್ಲಿ ಕ್ಯಾನ್ಸರ್ ಗುಣಪಡಿಸುವ ಬೀಜ ಸಿಗುತ್ತದೆ. ಅದನ್ನು ಖರೀದಿಸಿ ಮೈಸೂರಿನಲ್ಲಿ ಮಾರಾಟ ಮಾಡಿದರೆ ಹೆಚ್ಚು ದುಡ್ಡು ಗಳಿಸಬಹುದೆಂದು ವಿಶ್ವೇಶ್ವರ ಹೆಗಡೆ ಅವರಿಗೆ ಆಮೀಷವೊಡ್ಡಿದ್ದಾರೆ. ಇದಕ್ಕೆ ಮರುಳಾದ ವಿಶ್ವೇಶ್ವರ ಹೆಗಡೆ ಸ್ಯಾಂಪಲ್ ತರಿಸಿಕೊಂಡು ನೋಡಿದ್ದಾರೆ.

ಸ್ಯಾಂಪಲ್ ನೋಡಿದ ಮೇಲೆ ಜೆಸ್ಸಿಕಾ ಮೇಲೆ ನಂಬಿಕೆ ಬಂದು ಅನಿತಾ ಗುಪ್ತಾ ಅವರ ಮಧ್ಯಸ್ಥಿಕೆಯಲ್ಲಿ ಮೂರ್ನಾಲ್ಕು ಬ್ಯಾಂಕುಗಳ ಖಾತೆಗೆ 11.74 ಲಕ್ಷ ರು. ಹಣ ಪಾವತಿಸಿದ್ದಾರೆ. ಹಣ ಪಾವತಿಸಿ ಹಲವು ದಿನ ಕಳೆದರೂ ಕ್ಯಾನ್ಸರ್ ಗುಣಪಡಿಸುವ ಬೀಜ ಬಾರದ ಕಾರಣ ಅನುಮಾನಗೊಂಡು ಜೆಸ್ಸಿಕಾ ಅವರನ್ನು ಸಂಪರ್ಕಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆಗ ಅವರಿಗೆ ಮೋಸ ಹೋಗಿರುವುದು ಅರಿವಾಗಿದ್ದು, ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

comments

Related Articles

error: