
ಮೈಸೂರು
ವಿಧಾನ ಪರಿಷತ್ ಚುನಾವಣೆ : ಮತದಾರರ ಪಟ್ಟಿ ಹೆಸರು ನೋಂದಾಯಿಸಿಕೊಳ್ಳಲು ಕರೆ
ಮೈಸೂರು, ಡಿ.9 : ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಮತದಾರರ ಪಟ್ಟಿಗೆ ಪರಿಷ್ಕರಣೆ ಮಾಡಲಾಗುತ್ತಿದ್ದು, ಈ ಹಿಂದಿನ ಚುನಾವಣೆಯಲ್ಲಿ ತಯಾರಿಸಲಾದ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಹೊಸದಾಗಿ ನಮೂನೆ-19 ರಲ್ಲಿ ಅರ್ಜಿಯನ್ನು ಸಲ್ಲಿಸಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಮೈಸೂರು ತಾಲ್ಲೂಕು ತಹಶೀಲ್ದಾರ್ ರಮೇಶ್ಬಾಬು ತಿಳಿಸಿದ್ದಾರೆ.
ಹೆಸರನ್ನು ನೊಂದಾಯಿಸಲು ದಿನಾಂಕ 21-12-2017 ರಂದು ಕಡೆಯ ದಿನಾಂಕವಾಗಿದ್ದು, ಮೈಸೂರು ತಾಲ್ಲೂಕಿನ ಅರ್ಹ ಮತದಾರರು(ಶಿಕ್ಷಕರು) ದಿನಾಂಕ 21-12-2017 ರ ಸಂಜೆ 5-30 ಘಂಟೆಯ ಒಳಗಾಗಿ ನಮೂನೆ-19 ನ್ನು ಸಾಮಾನ್ಯ ನಿವಾಸದ ದಾಖಲಾತಿಯೊಂದಿಗೆ ತಾಲ್ಲೂಕು ಕಚೇರಿ, ಮಿನಿವಿಧಾನ ಸೌಧ, ನಜರಬಾದ್, ಮೈಸೂರು ಇಲ್ಲಿನ ಚುನಾವಣಾ ಶಾಖೆಗೆ ಸಲ್ಲಿಸಬೇಕೆಂದು ಅವರು ಕೋರಿದ್ದಾರೆ.