ಸುದ್ದಿ ಸಂಕ್ಷಿಪ್ತ

ಸಂಘಟನಾ ಹೋರಾಟದಿಂದ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು : ನಾಪಂಡ ಮುತ್ತಪ್ಪ

ರಾಜ್ಯ(ಮಡಿಕೇರಿ)ಡಿ.10:- ಸಂಘಟನಾ ಹೋರಾಟದಿಂದ  ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಬಾಣೆಯ ಸಮುದಾಯಭವನದಲ್ಲಿ ಉಪ್ಪಾರ ಭಗೀರಥ ಸಂಘ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಉಪ್ಪಾರ ಜನಾಂಗದವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾಗಿದೆ. ಸಂಘದ ಮೂಲಕ ವಿದ್ಯಾನಿಧಿಯನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಕಲ್ಪಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಉಪ್ಪಾರ ಭಗೀರಥ ಸಂಘದ ಅಧ್ಯಕ್ಷ ಕ್ಯಾತಶೆಟ್ಟಿ, ಕರವೇ ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಜಾನಪದ ಪರಿಷತ್ತಿನ ಸೋಮವಾರಪೇಟೆ  ಹೋಬಳಿ ಘಟಕದ ಕಾರ್ಯದರ್ಶಿ ಎಂ.ಎ. ರುಬೀನಾ, ಉಪಾಧ್ಯಕ್ಷ ನ.ಲ. ವಿಜಯ, ಐಎನ್‍ಟಿಯುಸಿಯ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಅಶ್ರಫ್, ಗಣೇಶ್, ಉಪ್ಪಾರ ಭಗೀರಥ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ರವಿ, ಉಪಾಧ್ಯಕ್ಷೆ ಜಯ ರಮೇಶ್, ಸಹಕಾರ್ಯದರ್ಶಿ ವನಿತಾ ಆನಂದ್, ಖಜಾಂಚಿ ಶಿವಕುಮಾರ್ ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: