ಕರ್ನಾಟಕಪ್ರಮುಖ ಸುದ್ದಿ

ನಮ್ಮ ಅಂತರಂಗದ ಶುದ್ಧಿ ಮಾಡಿಕೊಳ್ಳಬೇಕಾದರೆ ಭಕ್ತಿ ಮಾರ್ಗಮುಖ್ಯವಾಗುತ್ತದೆ : ಚಾರುಕೀರ್ತಿ ಭಟ್ಟಾರಕ ಸ್ಮಾಮೀಜಿ

ರಾಜ್ಯ(ಹಾಸನ)ಡಿ.11:-  ನಮ್ಮ ಅಂತರಂಗದ ಶುದ್ಧಿ ಮಾಡಿಕೊಳ್ಳಬೇಕಾದರೆ ಭಕ್ತಿ ಮಾರ್ಗಮುಖ್ಯವಾಗುತ್ತದೆ, ಭಕ್ತಿಯಿಂದ ನಮ್ಮಲ್ಲಿರುವ ಕಲ್ಮಶಗಳನ್ನು ತೊಡೆದುಹಾಕಬಹುದು ಎಂದು ಚಾರುಕೀರ್ತಿ ಭಟ್ಟಾರಕ ಸ್ಮಾಮೀಜಿ ಆಶೀರ್ವಚನ ನೀಡಿದರು.

ಜೈನಕಾಶಿ ಶ್ರವಣಬೆಳೊಳದ ಗೊಮ್ಮಟನಗರದ ಶ್ರೀ ರತ್ನಾಕರವರ್ಣಿ ಸಭಾ ಮಂಟಪದಲ್ಲಿ ನಡೆದ ರಾಜ್ಯ ಮಟ್ಟದ ಜಿನಭಕ್ತಿ ಗೀತಾಂಜಲಿ ಸ್ಪರ್ಧೆಯಲ್ಲಿ  ವಿಜೇತರಾದವರಿಗೆ ಬಹುಮಾನ ನೀಡುವ ಕಾರ್ಯಕ್ರಮದಲ್ಲಿ ಆಶೀರ್ವದಿಸಿದರು. ಯಾರು ದೇವರ ಸ್ಮರಣೆ ಮಾಡುತ್ತಾರೋ ಅವರು ಉತ್ತಮ ಸಂಸ್ಕಾರಗಳನ್ನು ಪಡೆಯುತ್ತಾರೆ. ಸಾಧನೆಗೆ ಸ್ಫೂರ್ತಿ ಮುಖ್ಯವಾಗಿದ್ದು, ಸಾಧನೆ ಮಾಡಲು ನಿರಂತರ ಪರಿಶ್ರಮವಿರಬೇಕು. ನಮ್ಮ ದೇಶದ ಮೊದಲ ಪ್ರಧಾನಿ ಜವಹರ್‍ಲಾಲ್ ನೆಹರು ಶ್ರವಣಬೆಳಗೊಳಕ್ಕೆ ಆಗಮಿಸಿದಾಗ ಗಣ್ಯರು ಭೇಟಿ ನೀಡಿ ಅನಿಸಿಕೆ ಬರೆಯುವ ಪುಸ್ತಕದಲ್ಲಿ ಬಾಹುಬಲಿಗೆ ನಮಸ್ಕಾರ ಮಾಡುವ ಅಗತ್ಯವಿಲ್ಲ. ಬಾಹುಬಲಿಯ ತಟದಲ್ಲಿ ಮಸ್ತಕ ತನ್ನಷ್ಟಕ್ಕೇ ತಾನೇ ಬಾಗುತ್ತದೆ ಎಂದು ಹಿಂದಿಯಲ್ಲಿ ನಮೂದಿಸುವುದನ್ನು ಶ್ರೀಗಳು ನೆನಪಿಸಿದರು.

ಖ್ಯಾತ ಕನ್ನಡ ಚಲನಚಿತ್ರ ನಟ ಮತ್ತು ಭರತನಾಟ್ಯ ಕಲಾವಿದ ಡಾ. ಶ್ರೀಧರ್ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿ  ಸಿನಿಮಾದಲ್ಲಿ ಹಲವಾರು ನಾಯಕರನ್ನು ನೋಡುತ್ತೇವೆ ಆದರೆ ನಮ್ಮ ದೇಶದ ನಿಜವಾದ ನಾಯಕ ಗೊಮ್ಮಟೇಶ್ವರ. ಬಾಹುಬಲಿಯ ತತ್ವ ಆದರ್ಶಗಳು ಎಂದಿಗೂ ಚಿರಸ್ಮರಣೀಯ, ನಮ್ಮ ಜೀವನವನ್ನು ಸಕ್ರಮವಾಗಿಟ್ಟುಕೊಳ್ಳಬೇಕಾದರೆ ಜೈನ ಧರ್ಮದ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಏಕೆಂದರೆ ಜೈನ ಧರ್ಮದಲ್ಲಿರುವ ಸಾತ್ವಿಕತೆ, ಸರಳತೆ, ಹಾಗೂ ನಿರಾಡಂಭರತೆ ಬಹಳ ಮುಖ್ಯ ಎಂದರು. ಎಲ್ಲಾ ಧರ್ಮಗಳು ಅಹಿಂಸೆಗೆ ಒತ್ತು ನೀಡಿವೆ ಆದರೆ ಅಹಿಂಸಾ ಮನೋಧರ್ಮವನ್ನು ಹೆಚ್ಚು ಅಳವಡಿಸಿಕೊಂಡು ಬರುತ್ತಿರುವುದು ಜೈನ ಧರ್ಮ ಎಂದು ತಿಳಿಸಿದರು.

ನಮ್ಮ ದೇಶದ ಸಂಸ್ಕೃತಿ ಉಳಿಯುವಿಕೆಗೆ ಜೈನ  ಜೈನ ಧರ್ಮವನ್ನು ನಡುವೆ ಅಹಿಂಸಾ ಪರಮಧರ್ಮ, ಜೈನ ಸಾಹಿತ್ಯದಲ್ಲಿ ಸಂಸ್ಕೃತ  ವಾಙ್ಞಯಕ್ಕೆ ಅದ್ಭುತ ಕೊಡುಗೆ ನೀಡಿದೆ. ಆತ್ಮ ಸಾಕ್ಷಾತ್ಕಾರದಲ್ಲಿ ಬಂದ ವ್ಯಕ್ತಿಗಳ ಮನಸ್ಸು ಒಂದೇ ತರಹ ಇರುತ್ತದೆ ಎಂದರು.  ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಮಾತನಾಡಿ  ಜನಪದವನ್ನು ಬಳಸಿಕೊಂಡು ಸಿನೆಮಾ ಮಾಡಿದವರು ಗೆದ್ದಿದ್ದಾರೆ ಆದರೆ ನಿಜವಾದ ಜನಪದರು ಅವನತಿ ಹೊಂದಿರುವು ವಿಷಾದಧ ಸಂಗತಿಯಾಗಿದೆ ಎಂದರು.  ಇಂತಹ ಸಂದರ್ಭದಲ್ಲಿ ಕಳೆ ಕುಂದಿರುವ ಜನಪದಕ್ಕೆ ಜೀವ ತುಂಬುವ ವೈಭವದ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿ ರಂಗಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ಒಟ್ಟು 6 ವಿಭಾಗಳಿಂದ 34 ತಂಡಗಳು ಆಯ್ಕೆಗಿದ್ದು ಅಂತಿಮ ಸುತ್ತಿನಲ್ಲಿ 12 ತಂಡಗಳು ಆಯ್ಕೆಯಾಗಿದ್ದವು.

ಕಾರ್ಯಕ್ರಮದಲ್ಲಿ ಮೊದಲ ಸ್ಥಾನವನ್ನು ಕಾರ್ಕಳದ ಜಿನ ಭಜನಾ ತಂಡ ಪಡೆಯಿತು. 2 ನೇ ಸ್ಥಾನವನ್ನು ಧಾರವಾಡದ ಸಂಯುಕ್ ಪ್ರಜ್ಞಾ ಜಿನ ಮಹಿಳಾ ಮಂಡಳಿ ಪಡೆಯಿತು. ಮೂರನೇ ಸ್ಥಾನವನ್ನು ಬೆಂಗಳೂರಿನ ಹಂಸಗಾಮಿನಿ ತಂಡದ ಸದಸ್ಯರು ಪಡೆದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳದ  ಹೇಮಾವತಿ ಹೆಗಡೆಯವರು, ಅನಿತಾ ಸುರೇಂದ್ರ ಕುಮಾರ್, ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಕಾರ್ಯಾಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ಸುರೆಂದ್ರಕುಮಾರ್ ಹೆಗ್ಗಡೆ,  ಗೊಮ್ಮಟವಾಣಿ ಸಂಪಾದಕರು ಎಸ್.ಎನ್. ಅಶೋಕ್ ಕುಮಾರ್ ಗಾಯಕಿ ಮಂಜುಳಾ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: