ಕ್ರೀಡೆಮೈಸೂರು

ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ ಮುಂಬೈ

ರಣಜಿ ಟ್ರೋಫಿ  ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ತಂಡ ಉತ್ತರಪ್ರದೇಶ ಎದುರು ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

ಮೈಸೂರಿನ ಗಂಗೋತ್ರಿಯ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿರುವ ಮುಂಬೈ ಎಂಟು ರನ್ ಗಳ ಅಲ್ಪ ಮುನ್ನಡೆಯೊಂದಿಗೆ ಎರಡನೇ ದಿನದಾಟದ ಅಂತ್ಯಕ್ಕೆ 24 ಓವರ್ ಗಳಲ್ಲಿ 2ವಿಕೆಟ್ ನಷ್ಟಕ್ಕೆ 51ರನ್ ಗಳಿಸಿದ್ದು, ಒಟ್ಟು 59 ರನ್ ಗಳಿಂದ ಮುಂದಿದೆ.

ಉತ್ತರ ಪ್ರದೇಶ ತಂಡದವರು ಮೊದಲ ಇನ್ನಿಂಗ್ಸ್ ನಲ್ಲಿ 76.1 ಓವರ್ ಗಳಲ್ಲಿ 225 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದ್ದಾರೆ. 7ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ ತಂಡಕ್ಕೆ ರಿಂಕು ಸಿಂಗ್ ಆಸರೆಯಾಗಿದ್ದು, 70 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

148 ಎಸೆತ ಎದುರಿಸಿದ ರಿಂಕು ಎಂಟು ಬೌಂಡರಿ ಗಳಿಸಿದರು. ಎಂಟನೇ ವಿಕೆಟ್ ಜೊತೆಯಾಟದಲ್ಲಿ ಕುಲದೀಪ್ ಯಾದವ್ ಜೊತೆಗೂಡಿ 53ರನ್ ಸೇರಿಸಿದರು. ಕುಲದೀಪ್ ಅರ್ಧಶತಕ ಗಳಿಸಿದರು. 104 ಎಸೆತ ಎದುರಿಸಿದ ಅವರು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.

ಮುಂಬೈ ತಂಡದ ಎಲ್ಲರ ಪರಿಣಾಮಕಾರಿ ದಾಳಿಯಿಂದ ತುಷಾರ್ ದೇಶಪಾಂಡೆ ಮೂರು ವಿಕೆಟ್, ಅಭಿಷೇಕ್ ನಾಯರ್, ವಿಶಾಲ್ ದಾಬೋಲ್ಕರ್, ಆದಿತ್ಯ ಧುಮಾಲ್ ತಲಾ ಎರಡು ವಿಕೆಟ್ ಪಡೆದರು.

Leave a Reply

comments

Related Articles

error: