ಕರ್ನಾಟಕಪ್ರಮುಖ ಸುದ್ದಿ

ಚನ್ನಪಟ್ಟಣ ತಾಲೂಕಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭೇಟಿ : ಭೈರವನ ಸನ್ನಿಧಿಯಲ್ಲಿ ವಿಶೇಷ ಪೂಜೆ

ರಾಜ್ಯ(ರಾಮನಗರ)ಡಿ.11:- ಜಿಲ್ಲೆಯ ಚನ್ನಪಟ್ಟಣ ತಾಲೂಕಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭೇಟಿ ನೀಡಿ, ಭೈರವನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಚನ್ನಪಟ್ಟಣ ಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಚನ್ನಪಟ್ಟಣದ ನೀಲಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಭೈರವನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚನ್ನಪಟ್ಟಣ ತಾಲೂಕಿನ ಶಕ್ತಿದೇವರು ಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾಲೂಕಿನಲ್ಲಿ ಸಂಚಲನ ಮೂಡಿಸಿದರು.  ದೇವಾಲಯದ ಸನ್ನಿಧಿಗೆ ಬೇಗ ಬಂದರೂ ದೇವಾಲಯಕ್ಕೆ ಒಳಗಡೆ ಹೋಗದೆ  9.30ಕ್ಕೆ  ಸರಿಯಾಗಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: