ಮೈಸೂರು

ಮೈಮೇಲಿನ ಆಭರಣಗಳನ್ನು ಪ್ರದರ್ಶಿಸದೇ ಬಟ್ಟೆಗಳಿಂದ ಮರೆಮಾಚುವ ಮೂಲಕ ಸರಗಳ್ಳತನವನ್ನು ತಡೆಯಿರಿ : ಇನ್ಸಪೆಕ್ಟರ್ ರಘು

ಮೈಸೂರು,ಡಿ.11:-  ಮೈಮೇಲಿನ ಆಭರಣಗಳನ್ನು  ಬಟ್ಟೆಗಳಿಂದ ಮುಚ್ಚಿಕೊಂಡು ಹೋಗುವ ಮೂಲಕ ಸರಗಳ್ಳತನವನ್ನು ತಡೆಯಿರಿ ಎಂದು ಲಕ್ಷ್ಮಿಪುರಂ ಠಾಣೆಯ ಇನ್ಸಪೆಕ್ಟರ್ ರಘು ಸಲಹೆ ನೀಡಿದರು.

ನಗರದ ಹಾರ್ಡ್ವಿಕ್ ಶಾಲೆಯ ಬಳಿ ಸೋಮವಾರ ಮೈಸೂರು ನಗರ ಪೊಲೀಸ್ ಮತ್ತು ಲಕ್ಷ್ಮಿಪುರಂ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಆಭರಣವನ್ನು ಪ್ರದರ್ಶಿಸಿಕೊಂಡು ಹೋಗುವುದರಿಂದ ಸರಗಳ್ಳತನಗಳು ನಡೆಯುತ್ತವೆ. ಆದ್ದರಿಂದ ಆಭರಣಗಳನ್ನು ಪ್ರದರ್ಶಿಸದೇ ಸೀರೆಯ ಸೆರಗಿನಿಂದ ಇಲ್ಲವೇ ದುಪ್ಪಟ್ಟಾಗಳಿಂದ ಮರೆಮಾಚಿ ಎಂದು ಹೇಳಿದರು. ಸರಗಳ್ಳತನಗಳು ನಿಮ್ಮ ಕಣ್ಣೆದುರು ನಡೆಯುತ್ತಿದ್ದರೆ ಕಳ್ಳರು ವಾಹನದಲ್ಲಿ ಬಂದಿದ್ದರೆ ವಾಹನಗಳ ನಂಬರ್ ನ್ನು ಬರೆದು ಹತ್ತಿರದ ಪೊಲೀಸ್ ಠಾಣೆಗೆ ನೀಡಿ ಎಂದರು. ಪ್ರವಾಸ ತೆರಳುವ ಸಂದರ್ಭ ಮನೆಯಿಂದ ವಾರಗಟ್ಟಲೇ ಹೊರಗುಳಿಯಬೇಕಾಗಿ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ ಹೋಗಿ, ಅಕ್ಕಪಕ್ಕದ ಮನೆಗಳಿಗೂ ತಿಳಿಸಿ, ಮಕ್ಕಳು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಈ ಸಂದರ್ಭ ಎಎಸ್ ಐ ಗೌರಿಶಂಕರ್, ಸಿಬ್ಬಂದಿಗಳಾದ ಸುದೀಪ್, ಕುಮಾರ್, ಮಧು, ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು. ಜಾಥಾ ಲಕ್ಷ್ಮಿಪುರಂ ಠಾಣೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: