ಕ್ರೀಡೆಮೈಸೂರು

ಟಿಎಫ್‍ಎನ್ 2017 ಮೊದಲ ಹಂತ ಮುಗಿಸಲು 167 ಕಿ.ಮೀ ಕ್ರಮಿಸಿದ 128 ಸೈಕ್ಲಿಸ್ಟ್ ಗಳು

ಮೈಸೂರು, ಡಿ,11:-  10ನೇ ವರ್ಷದ ಟೂರ್ ಆಫ್ ನೀಲಗಿರೀಸ್ (ಟಿಎಫ್‍ಎನ್), ರೈಡ್‍ಎಸೈಕಲ್ ಪ್ರತಿಷ್ಠಾನದ ಪ್ರಸಿದ್ದ ಸೈಕ್ಲಿಸ್ಟ್ ಗಳನ್ನು ಸೆಳೆಯುತ್ತಿರುವ ಗ್ರಾಂಡ್ ಟೂರ್, ಬೆಂಗಳೂರಿನಲ್ಲಿ ಉದ್ಘಾಟನೆ ಪಡೆದು ಸಂಜೆ ಮೈಸೂರು ತಲುಪಿದೆ.

ಈ ಭವ್ಯ ಪ್ರವಾಸದಲ್ಲಿ 128 ಸೈಕ್ಲಿಸ್ಟ್ ಗಳು ಕರ್ನಾಟಕ, ಕೇರಳ, ಹಾಗೂ ತಮಿಳುನಾಡುಗಳಲ್ಲಿ 1000ಕ್ಕೂ ಹೆಚ್ಚು ಕಿ.ಮೀ ಕ್ರಮಿಸಲಿದ್ದಾರೆ ಡಿಸೆಂಬರ್ 10 ರಿಂದ 17ರ ನಡುವೆ, ಬೆಂಗಳೂರಿನಿಂದ ಪ್ರವಾಸ ಆರಂಭಿಸಿರುವ ಸೈಕ್ಲಿಸ್ಟ್ ಗಳು ಮೈಸೂರು, ಮಡಿಕೇರಿ, ಸುಲ್ತಾನ್ ಬತ್ತೇರಿ, ಉದಕಮಂಡಲ (ಊಟಿ) ಮೂಲಕ ಸಾಗಿ ಮತ್ತೆ ಮೈಸೂರಿಗೆ ಹಿಂದಿರುಗಲಿದ್ದಾರೆ. ಮೊದಲ ದಿನ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ ಸೈಕ್ಲಿಸ್ಟ್ ಗಳು ಬ್ರೇಕ್‍ಅವೇ ಅಡ್ಡಹೆಸರಿನ 167 ಕಿ.ಮೀ ದೂರವನ್ನು ಕ್ರಮಿಸಿದರು,

ಈ ಕುರಿತು  ಸತೀಶ್ ಬೆಳವಾಡಿ ಮಾತನಾಡಿ  ಟೂರ್ ಡ್ಯೆರೆಕ್ಟರ್, ಟಿಎಫ್‍ಎನ್ 2017, ಹತ್ತನೇ ಆವೃತ್ತಿಯಲ್ಲಿ ಅತಿ ಹೆಚ್ಚುಮಂದಿ ಸೈಕ್ಲಿಸ್ಟ್ ಗಳು ಭಾಗವಹಿಸುತ್ತಿದ್ದಾರೆ. ಕಣದಲ್ಲಿರುವ 128 ಸೈಕ್ಲಿಸ್ಟ್ ಗಳ ಪೈಕಿ ಸೈಕ್ಲಿಂಗ್‍ನಲ್ಲಿ ಪ್ರಶಸ್ತಿ ಗೆದ್ದಿರುವವರು ಹಾಗೂ ಛಾಪು ಮೂಡಿಸಿರುವವರೂ ಇದ್ದಾರೆ. ಟೂರ್ ಆಫ್ ನೀಲಗಿರೀಸ್ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯಾಗಿದೆ. ನವೀನ್ ಜಾನ್ ಮತ್ತು ಕಿರಣ್ ಕುಮಾರ್ ರಾಜು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ಗಮನ ಸೆಳೆದಿದ್ದಾರೆ ಎಂದರು.

ಟಿಎಫ್‍ಎನ್ 2017ರಲ್ಲಿ ಭಾಗವಹಿಸಲಿರುವ 128 ಸೈಕ್ಲಿಸ್ಟ್ ಪೈಕಿ 120 ಮಂದಿ ಪುರುಷರು ಎಂಟು ಮಂದಿ ಮಹಿಳೆಯರು. ಇವರಲ್ಲಿ 110 ಮಂದಿ ಭಾರತದ ಇತರ ಪ್ರದೇಶಕ್ಕೆ ಸೇರಿದವರು. 18 ಮಂದಿ ನೆದರ್‍ಲೆಂಡ್, ಜರ್ಮನಿ, ಸ್ವೀಡನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ರಷ್ಯಾದವರು. ಭಾಗವಹಿಸುತ್ತಿವವರ ಪೈಕಿ ಶೇ.65 ಮಂದಿ ಹಿರಿಯ ಮತ್ತು ಮಧ್ಯಮ ಮ್ಯಾನೇಜ್‍ಮೆಂಟ್‍ನ ವೃತ್ತಿಪರರು. ಸಾಧಕರು ಇದರಲ್ಲಿ ಭಾಗವಹಿಸುತ್ತಿರುವುದು ಟಿಎಫ್‍ಎನ್ ಜನಪ್ರಿಯತೆ ತೋರುತ್ತದೆ. (ಎಸ್.ಎಚ್)

Leave a Reply

comments

Related Articles

error: