ಮೈಸೂರು

ಸಾರ್ವಜನಿಕ ಶೌಚಾಲಯಕ್ಕೆ ಚಾಲನೆ

ಮೈಸೂರು,ಡಿ.11:- ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಾಣವಾದ ನೂತನ ಸಾರ್ವಜನಿಕ ಶೌಚಾಲಯಕ್ಕೆ ಮೇಯರ್ ಎಂ.ಜೆ.ರವಿಕುಮಾರ್  ಚಾಲನೆ ನೀಡಿದರು.

20 ಲಕ್ಷ ಅಂದಾಜು ವೆಚ್ಚದಲ್ಲಿ ನಗರದ ದೇವರಾಜ ಮೊಹಲ್ಲಾದ ಬೋಟಿ ಬಜಾರ್ ನಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಇಂದು ಮೇಯರ್ ಎಂ.ಜೆ ರವಿ ಕುಮಾರ್ ಚಾಲನೆ ನೀಡಿದರು. ಈ ವೇಳೆ ಪಾಲಿಕೆ ಆಯುಕ್ತ ಜೆ.ಜಗದೀಶ್ , ಉಪಮೇಯರ್ ರತ್ನ ಲಕ್ಮಣ್ ಇತರರು ಭಾಗಿಯಾಗಿದ್ದರು. ಶೌಚಾಲಯ ಆಧುನಿಕ ತಂತ್ರಜ್ಞಾನದ ಸ್ನಾನದ ಮನೆ ಮತ್ತು ಸೋಲಾರ್ ಬಿಸಿನೀರಿನ ವ್ಯವಸ್ಥೆಯನ್ನು ಹೊಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: