
ಕರ್ನಾಟಕ
ಯಳಂದೂರು : ಪ.ಪಂ. ಅಧಿಕಾರಿಗಳಿಂದ ಕಂದಾಯ ವಸೂಲಾತಿ
ರಾಜ್ಯ(ಚಾಮರಾಜನಗರ)ಡಿ.11:- ಯಳಂದೂರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವರ್ಗದ ತಂಡವು ಪಟ್ಟಣದಲ್ಲಿ ಮನೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಕಂದಾಯ ವಸೂಲಾತಿಯನ್ನು ಮಾಡುತ್ತಿದ್ದಾರೆ.
ಪ.ಪಂ.ಮುಖ್ಯಾಧಿಕಾರಿ ಉಮಾಶಂಕರ ಮಾತನಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಅಂಗಡಿ ಮಾಳಿಗೆಗಳ ಮಾಲೀಕರು ಹಾಗೂ ವ್ಯಾಪಾರದಾರರು ಕಡ್ಡಾಯವಾಗಿ ಕಂದಾಯವನ್ನು ಪಾವತಿ ಮಾಡಬೇಕೆಂದು, 400 ಕ್ಕೂ ಅಂಗಡಿಗಳನ್ನು ಹೊಂದಿದ್ದು, ಡಿಸೆಂಬರ ಒಳಗೆ ಸಕಾಲದಲ್ಲಿ ಪರವಾನಗಿಗಳನ್ನು ಪಡೆಯುವ ಜೊತೆಗೆ ಆ ಬಾಡಿಗೆಗೆ ಕಟ್ಟಡ ಮಾಲೀಕರು ತಮ್ಮ ಕಟ್ಟಡಗಳ ತೆರಿಗೆಯ ಹಣವನ್ನು ಕಡ್ಡಾಯವಾಗಿ ಪಾವತಿಮಾಡಬೇಕು ಹಾಗೂ ಮನೆಗಳ ಕುಡಿಯುವ ನೀರು, ಸೇರಿದಂತೆ ಸ್ವಯಂ ಘೋಷಿತ ಆಸ್ತಿಗಳನ್ನು ಘೋಷಿಸಿಕೊಳ್ಳುವಂತೆ ಇತರೆ ತೆರಿಗೆಗಳ ಹಣವನ್ನು ಕಾಲ ಕಾಲಕ್ಕೆ ಪಾವತಿ ಮಾಡಬೇಕು. ಅಕ್ರಮವಾಗಿ ಪಡೆದುಕೊಂಡಿರುವ ಕುಡಿಯುವ ನಲ್ಲಿಗಳ ಮೂಲಕ ನೀರನ್ನ ಸಂಪರ್ಕ ಹೊಂದಿರುವ ಮನೆಯ ಮಾಲೀಕರು ತೆರಿಗೆಯ ಹಣವನ್ನು ಪಾವತಿ ಮಾಡಿ ಸಂಕ್ರಮಗೊಳ್ಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸೂಕ್ತದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಮಹೇಶ್ಕುಮಾರ ಸಿಬ್ಬಂದಿಗಳಾದ ಪ್ರಕಾಶ್, ಮಲ್ಲಿಕಾರ್ಜುನ, ರಘು, ರವಿ, ನಾಗರಾಜು ಸೇರಿದಂತೆ ಇತರರು ಹಾಜರಿದ್ದರು. (ಜಿ.ಎನ್,ಎಸ್.ಎಚ್)