ಮೈಸೂರು

ಜೆಎಸ್ಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಯುವ ವಿಜ್ಞಾನಿ

ಮೈಸೂರು,ಡಿ.12:- ಮೈಸೂರು ನಗರದ ಬಿ.ಎನ್‍ ರಸ್ತೆಯಲ್ಲಿರುವ ಜೆಎಸ್ಎಸ್‍ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಯುಜಿಸಿಯ ದೀನ್‍ ದಯಾಳ್‍ ಉಪಾಧ್ಯಾಯ ಕೌಶಲ್ಯ  ಕೇಂದ್ರವನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳನ್ನು ಅನ್ವೇಷಣೆಗೆ ತೊಡಗಿಸುವ ಮೂಲಕ ಸಂಶೋಧನೆಗೆ ವೇದಿಕೆಯನ್ನು ಒದಗಿಸಿದೆ.

ಈ ಕಾಲೇಜಿನಲ್ಲಿ ಓದುತ್ತಿರುವ  ಎನ್.ಎಂ. ಪ್ರತಾಪ್  ಎಂಬ ವಿದ್ಯಾರ್ಥಿಯು ಬಾರ್ಡರ್ ಸೆಕ್ಯುರಿಟಿ ಟೆಲಿಗ್ರಾಫಿ, ಕ್ರಿಪ್ಟೋಗ್ರಫಿ ಇನ್ ಡ್ರೋನ್ ನೆಟ್ವ ರ್ಕಿಂಗ್ ಸಿಸ್ಟಂ, ಡ್ರೋನ್‍ ಇನ್ ಟ್ರಾಫಿಕ್ ಮ್ಯಾನೇಜ್ಮೆಗಟ್ ಮತ್ತು ನ್ಯಾಷನಲ್ ಸೊಷಿಯೋ ಡಿಫೆನ್ಸ್‍  ಕ್ಷೇತ್ರಗಳಲ್ಲಿ ಉತ್ತಮ ಸಂಶೋಧಕರಾಗಿದ್ದಾರೆ, ಈ ಸಂಶೋಧನೆಗಳಿಗಾಗಿ  ಅವರು ಹಲವಾರು ಬಹುಮಾನ, ಪ್ರಶಸ್ತಿ, ವಿದ್ಯಾರ್ಥಿವೇತನಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ  ನೈಪುಣ್ಯ ಭಾರತದಡಿಯಲ್ಲಿ ಯೋಜನಾ ಅಭಿವರ್ಧಕ ಸ್ಥಾನವನ್ನು ಪಡೆದಿದ್ದಾರೆ.

ಜೆಎಸ್ಎಸ್ ಮಹಾವಿದ್ಯಾಪೀಠ ಮತ್ತು ಕಾಲೇಜಿನ ಸಹಕಾರದೊಂದಿಗೆ ಪ್ರತಾಪ್ ಅವರು ನವೆಂಬರ್ 29 ರಿಂದ  ಡಿಸೆಂಬರ್ 2 ರವರೆಗೆ ಜಪಾನಿನಲ್ಲಿ ನಡೆದ ಅಂತಾರಾಷ್ಟ್ರೀಯ ರೊಬೊಟಿಕ್ಸ್ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪ್ರತಾಪ್  ಚಿನ್ನ ಮತ್ತು ಬೆಳ್ಳಿ ಪದಕಗಳ ಜೊತೆಗೆ 10000 ಅಮೆರಿಕನ್ ಡಾಲರ್ ಬಹುಮಾನವನ್ನು ಪಡೆದಿದ್ದಾರೆ. 120 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದು ಆಯ್ಕೆಯಾದ ನಾಲ್ವರು ಯುವ ವಿಜ್ಞಾನಿಗಳಲ್ಲಿ ಪ್ರತಾಪ್ ಕೂಡ ಒಬ್ಬರಾಗಿದ್ದಾರೆ. ಪ್ರತಾಪ್ ರವರ ಸಾಧನೆಗೆ ಜೆಎಸ್ಎಸ್ ಮಹಾವಿದ್ಯಾಪೀಠದ ಆಡಳಿತ ವರ್ಗ ಮತ್ತು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರು, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: