ಸುದ್ದಿ ಸಂಕ್ಷಿಪ್ತ

13: ಸಂತಾಪ ಸೂಚಕ ಸಭೆ

ಮೈಸೂರು,ಡಿ.12:-  ಮೈಸೂರು ಪ್ರಿಂಟರ್ಸ್ ಕ್ಲಸ್ಟರ್ ಹಾಗೂ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ತು  ಡಿ.13 ರಂದು (ಬುಧವಾರ) ಸಂಜೆ 4 ಘಂಟೆಗೆ ಮೈಸೂರು ಪ್ರಿಂಟರ್ಸ್ ಕ್ಲಸ್ಟರ್  ಕಚೇರಿಯ ಸಭಾಂಗಣದಲ್ಲಿ ನ್ಯಾಯಾಲಯದ ಎದುರು, ಮೈಸೂರು ಇಲ್ಲಿ ಮುದ್ರಣಕಾರರಿಂದ ಸಂತಾಪ ಸೂಚಕ ಸಭೆಯನ್ನು ಆಯೋಜಿಸಿದೆ.

ಮೈಸೂರಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಯ ಕಹಳೆ ಉದಿದ, ಮೈಸೂರು ಆಟೋ ರಿಕ್ಷಾ ಮಾಲೀಕರು ಮತ್ತು ಚಾಲಕರು, ತರಕಾರಿ ಮಾರುವವರು ಹಾಗೂ ಮುದ್ರಣಕಾರರೂ ಒಳಗೊಂಡಂತೆ ಎಲ್ಲಾ ಶ್ರಮಿಕರ ಧ್ವನಿಯಾಗಿದ್ದ ರಾಜಶೇಖರ್ ಕೋಟಿ ಅವರ ಅಗಲಿಕೆಯು ಮೈಸೂರು ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪರಿಷತ್ತು ತಿಳಿಸಿದೆ. (ಎಸ್.ಎಚ್)

Leave a Reply

comments

Related Articles

error: