ಪ್ರಮುಖ ಸುದ್ದಿಮೈಸೂರು

ಅಂಗನವಾಡಿ ಕೇಂದ್ರದಲ್ಲಿ ಸಿಡಿದ ಕುಕ್ಕರ್ : ಕ್ಷಣಾರ್ಧದಲ್ಲಿ ತಪ್ಪಿದ ಅನಾಹುತ

ಮೈಸೂರು,ಡಿ.12:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಅಡುಗೆ ಮಾಡುವ ಕಳಪೆ ವಸ್ತುಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಆಗಬೇಕಿದ್ದ ಭಾರೀ ಅನಾಹುತ ಕ್ಷಣಾರ್ಧದಲ್ಲಿ ತಪ್ಪಿದ ಘಟನೆ ಶಾರದಾದೇವಿ ನಗರದಲ್ಲಿ ನಡೆದಿದೆ.

ಮೈಸೂರಿನ ಶಾರದಾದೇವಿನಗರದ ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್  ಸಿಡಿದು ಆಗಬೇಕಿದ್ದ ಭಾರಿ ಅನಾಹುತದಿಂದ  ಮಕ್ಕಳು ಹಾಗೂ ಅಡುಗೆ ಮಾಡುವ ಮಹಿಳೆಯರು ಪಾರಾಗಿದ್ದಾರೆ. ಇಂದು ಎಂದಿನಂತೆ ಅಂಗನವಾಡಿ ಕೇಂದ್ರಕ್ಕೆ ಅಡುಗೆ ಮಾಡುವ ಮಹಿಳೆಯರು ಬಂದು ತಮ್ಮ ಕೆಲಸವನ್ನು ಆರಂಭಿಸಿದ್ದು, ಮಕ್ಕಳಿಗೆ ಹಾಲು ಕಾಯಿಸಿ ನಂತರ ಮಧ್ಯಾಹ್ನದ ಊಟಕ್ಕೆಂದು ಕಾಳು ಬೇಯಿಸಲು ಕುಕ್ಕರ್ ಗೆ ಹಾಕಿದ್ದಾರೆ. ಆದರೆ ಕುಕ್ಕರ್ ಉತ್ತಮ ಕ್ವಾಲಿಟಿ ಅಲ್ಲದ ಕಾರಣ ಒಂದೇ ಕ್ಷಣದಲ್ಲಿ ಬ್ಲಾಸ್ಟ್ ಆಗಿದೆ. ಅಡುಗೆ ಮಾಡುವ ಮಹಿಳೆ ಗಾಬರಿಗೊಂಡು  ಅಲ್ಲಿ ಹತ್ತಿರದಲ್ಲಿಯೇ ಇದ್ದ ಮಕ್ಕಳನ್ನು ಕೂಡಲೇ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಈ ಕುರಿತು ಅಂಗನವಾಡಿ ಅಡುಗೆ ಸಹಾಯಕಿ ಶಿವಮ್ಮ ಮಾತನಾಡಿ ಎಂದಿನಂತೆ ನಾನು ಅಡುಗೆ ಮಾಡಲು ಬಂದು ಕೆಲಸ ಶುರು ಮಾಡಿ, ಮಕ್ಕಳಿಗೆ ಹಾಲು ಕಾಯಿಸಿಕೊಟ್ಟೆ ನಂತರ ಊಟಕ್ಕೆಂದು ಕುಕ್ಕರ್ ಗೆ ಕಾಳು ಹಾಕಿ ಸ್ವಲ್ಪ ಈ ಕಡೆ ತಿರುಗುವಷ್ಟರಲ್ಲಿ ಕುಕ್ಕರ್ ಸಿಡಿಯಿತು. ಇದು ಎರಡನೇ ಬಾರಿ ಆಗುತ್ತಿರುವುದು. ಆದರೆ ಯಾವುದೇ ಅಪಾಯವಾಗಿಲ್ಲ ಎಂದರು.

ಉಸ್ತುವಾರಿ ರಾಧಮ್ಮ ಮಾತನಾಡಿ  ಈ ಅಂಗನವಾಡಿ ಕೇಂದ್ರಕ್ಕೆ ಸುಮಾರು 70 ಮಕ್ಕಳು ಬರುತ್ತಾರೆ, ನಾವು ಕೆಲಸ ಮಾಡುವುದು ತುಂಬಾ ಕಷ್ಟವಾಗುತ್ತಿದೆ. ಮಕ್ಕಳ ನಿರ್ವಹಣೆ ತುಂಬಾ ಕಷ್ಟವಾಗಿದೆ ಎಂದು ಕಣ್ಣುತುಂಬಿಕೊಂಡರು. ಇನ್ನಾದರೂ ಸಂಬಂಧಪಟ್ಟವರು ಸೂಕ್ತಗಮನ ಹರಿಸಿ ಹೆಚ್ಚಿನ ಅನಾಹುತವಾಗುವುದಕ್ಕೂ ಮೊದಲು ಗುಣಮಟ್ಟದ ವಸ್ತುಗಳನ್ನು ಪೂರೈಸಿಯಾರೇ ಎಮಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: