ದೇಶಪ್ರಮುಖ ಸುದ್ದಿ

ಮಿನರಲ್ ವಾಟರ್‍ಗೆ ಎಂಆರ್‍ಪಿಗಿಂತ ಹೆಚ್ಚು ಹಣ ಪಡೆದ್ರೆ ಜೈಲು: ಸುಪ್ರೀಂಕೋರ್ಟ್‍ನಲ್ಲಿ ಕೇಂದ್ರ

ನವದೆಹಲಿ (ಡಿ.12): ಮಿನರಲ್ ವಾಟರ್ ಬಾಟಲಿಗಳಿಗೆ ಗರಿಷ್ಠ ಮುಖಬೆಲೆ ಎಂಆರ್‍ಪಿಗಿಂತ ಹೆಚ್ಚಿನ ಬೆಲೆ ವಸೂಲಿ ಮಾಡಿ ಮಾರಿದರೆ ಅಂತಹ ಮಾರಾಟಗಾರರನ್ನು ಅಥವಾ ಹೋಟೆಲ್, ರೆಸ್ಟೋರೆಂಟ್ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರಿರೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವುದಾಗಿ ಕೇಂದ್ರ ಸರ್ಕಾರವು ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಎಂಆರ್‍ಪಿಗಿಂತ ಹೆಚ್ಚಿನ ಬೆಲೆ ವಿಧಿಸುವುದು ಗ್ರಾಹಕರಿಗೆ ಮಾತ್ರ ಮಾಡುವ ಅನ್ಯಾಯವಲ್ಲ, ಜೊತೆಯಲ್ಲಿ ದೇಶದಕ್ಕೂ ತೆರಿಗೆ ವಂಚನೆ ಮಾಡಿದಂತಾಗುತ್ತದೆ. ಹೀಗಾಗಿ ಇಂತಹ ಹೋಟೆಲ್, ರೆಸ್ಟೋರೆಂಟ್ ಮತ್ತು ಮಲ್ಟಿಪ್ಲೆಕ್ಸ್‍ಗಳು, ಅಥವಾ ಬಿಡಿ-ಬಿಡಿ ಮಾರಾಟಗಾರು ಯಾರೇ ಇರಲಿ ಹೆಚ್ಚಿನ ಬೆಲೆಗೆ ಮಾರುವುದು ಸಾಬೀತಾದಲ್ಲಿ ಅಂತಹವರನ್ನು ಜೈಲಿಗೆ ಕಳಿಸಲಾಗುವುದು. ಹೋಟೆಲ್, ರೆಸ್ಟೋರೆಂಟ್ ಮತ್ತು ಮಲ್ಟಿಪ್ಲೆಕ್ಸ್‍ಗಳು, ಸಾಮಾನ್ಯ ದರದಲ್ಲಿ ನೀರಿನ ಬಾಟಲಿಗಳನ್ನು ಖರೀದಿಸಿರುತ್ತವೆ. ನಂತರ ಎಂಆರ್‍ಪಿ ದರದಲ್ಲಿ ಅವುಗಳನ್ನು ಮಾರಾಟ ಮಾಡದೆ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತವೆ. ಇದರಿಂದ ಸರ್ಕಾರಕ್ಕೆ ಬರಬೇಕಾಗಿದ್ದ ಹೆಚ್ಚುವರಿ ಆದಾಯ ಖೋತಾ ಆಗುತ್ತದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಸಂಬಂಧ ಫೆಡರೇಷನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರಂಟ್ ಅಸೋಸಯೇನ್ಸ್ ಆಫ್ ಇಂಡಿಯಾ – ಎಫ್‍ಎಚ್‍ಆರ್‍ಎಐ ಸುಪ್ರೀಮ್‍ಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಈ ಆರ್ಜಿಯ ಕುರಿತು ನ್ಯಾಯಾಲಯಕ್ಕೆ ತನ್ನ ಅಭಿಪ್ರಾಯ ತಿಳಿಸಿರುವ ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿದೆ. ಹಾಗೂ ಈ ರೀತಿ ಹೆಚ್ಚುವರಿ ಬೆಲೆ ಪಡೆಯುವುದು ಕಾನೂನಿನ ಪ್ರಕಾರ ಅಪರಾಧವೆಂದೂ ಹೇಳಿದ್ದು, ಮೊದಲ ಅಪರಾಧಕ್ಕೆ 25 ಸಾವಿರ ರೂ, ಎರಡನೇ ಅಪರಾಧಕ್ಕೆ 50 ಸಾವಿರ ರೂ. ದಂಡ ವಿಧಿಸುತ್ತದೆ. ಮತ್ತದೇ ತಪ್ಪು ಮಾಡಿದ್ರೆ 1 ಲಕ್ಷ ರೂ. ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ಕೂಡ ವಿಧಿಸಬಹುದು ಎಂದು ಎಚ್ಚರಿಕೆ ನೀಡಿದೆ.

(ಎನ್‍ಬಿಎನ್‍)

Leave a Reply

comments

Related Articles

error: