ಕರ್ನಾಟಕಕ್ರೀಡೆಮನರಂಜನೆ

10 ಓವರ್ ಗೆ ಸೀಮಿತಗೊಂಡ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿ

ಬೆಂಗಳೂರು,ಡಿ.12-ಸೆಲೆಬ್ರೆಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಕ್ರಿಕೆಟ್ ಪಂದ್ಯಾವಳಿ ಪ್ರಾರಂಭವಾಗಲಿದ್ದು, ವಿಶೇಷವೆಂದರೆ ಈ ಬಾರಿಯ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು 10 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ.

ಟಿ 20 ಮಾದರಿಯನ್ನು ಬಿಟ್ಟು ಪಂದ್ಯವನ್ನು ಟಿ 10 ಆಗಿ ಬದಲಾಯಿಸಲಾಗಿದೆ. ವಿಷಯವನ್ನು ಸ್ವತಃ ನಟ ಹಾಗೂಕರ್ನಾಟಕ ಬುಲ್ಡೋಜರ್ಸ್ತಂಡದ ನಾಯಕ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮನರಂಜನೆ ದೃಷ್ಟಿಯಿಂದ ಪಂದ್ಯವನ್ನು 10 ಓವರ್ ಗಳಿಗೆ ಇಳಿಸಲಾಗಿದೆಯಂತೆ. ವೇಗದ ಆಟ ಬಾರಿ ಇದ್ದು ನೋಡುಗರಿಗೆ ಅಷ್ಟೇ ಮಜಾ ನೀಡಲಿದೆ. ಬಾರಿ ಏಳನೇ ಆವೃತ್ತಿಯಸಿಸಿಎಲ್ಪಂದ್ಯ ನಡೆಯಲಿದ್ದು, ಕನ್ನಡ, ಹಿಂದಿ, ತಮಿಳುಮ ತೆಲುಗು ಸೇರಿದಂತೆ ಭಾರತ ಚಿತ್ರರಂಗದ ಅನೇಕ ದೊಡ್ಡ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.

ಡಿ.24 ಮತ್ತು 25 ರಂದು ಹೈದರಾಬಾದ್ ನಲ್ಲಿ ಮೈಕ್ರೊ ಪಂದ್ಯಾವಳಿ ನಡೆಯಲಿದ್ದು, ಜೂನ್ ತಿಂಗಳಿನಲ್ಲಿ ಲೀಗ್ ಪಂದ್ಯಗಳು ಪ್ರಾರಂಭವಾಗಲಿದೆ. (ವರದಿ-ಎಂ.ಎನ್)

Leave a Reply

comments

Related Articles

error: