ಮೈಸೂರು

ತಂದೆ ಮಗನ ಮೇಲಿನ ಹಲ್ಲೆ ಪ್ರಕರಣ : ಪ್ರಮುಖ ಆರೋಪಿಯ ಬಂಧನ

ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಶಿವಾಜಿ ರಸ್ತೆಯ ಮೊದಲನೇ ಕ್ರಾಸ್ ನಿವಾಸಿಗಳಾದ ಮೊಕ್ತಾರ್ ಮತ್ತವರ ಪುತ್ರ ಮೊಯಿನ್ ಮೇಲೆ ಅಕ್ಟೋಬರ್ 23ರ ರಾತ್ರಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆ ಸಂಬಂಧ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿತ್ತು. ಇದೀಗ ಹಲ್ಲೆಗೆ ಕಾರಣನಾದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸಿರಾಜ್ ಎಂದು ಗುರುತಿಸಲಾಗಿದೆ. ಈತ ಮೊಯಿನ್ ಬಾಮೈದನಾಗಿದ್ದು ಮೊನಿಷಾ ಎಂಬ ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದ. ಇದನ್ನು ತಿಳಿದ ಮೊಯಿನ್ ತನ್ನ ಮನೆಗೆ ಸಿರಾಜ್ ಮತ್ತು ಮೊನಿಷಾರನ್ನು ಕರೆಸಿ ಬುದ್ದಿ ಹೇಳಿದ್ದರು ಎನ್ನಲಾಗಿದೆ. ಆದರೆ ಮೊಯಿನ್ ಇವರಿಬ್ಬರ ಪ್ರೀತಿಗೆ ಅಡ್ಡಗಾಲಾಗುತ್ತಾರೆ ಎಂದು ತಿಳಿದ ಮೊನಿಷಾ ಮತ್ತು ಸಿರಾಜ್ ವ್ಯಕ್ತಿಗಳಿಬ್ಬರನ್ನು ಕರೆ ತಂದು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದೀಗ ಮೊನಿಷಾ ಮತ್ತಿಬ್ಬರು ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ. ಪ್ರಮುಖ ಆರೋಪಿ ಸಿರಾಜ್ ಘಟನೆ ನಡೆದ ದಿನದಿಂದ ತಲೆ ಮರೆಸಿಕೊಂಡಿದ್ದ. ಇದೀಗ ಎನ್.ಆರ್.ಠಾಣೆ ಪೊಲೀಸರು ಸಿರಾಜ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

comments

Related Articles

error: