
ಮೈಸೂರು
ಗಂಗಾಮತಸ್ಥರ ವಧು-ವರರ ಸಮಾವೇಶ ನ.18ರಂದು
ಮೈಸೂರಿನ ಗಂಗೋತ್ರಿ ಬಡಾವಣೆಯ ಗಂಗಾಮತಸ್ಥರ ಸಂಘದಲ್ಲಿ ಇತ್ತೀಚಿಗೆ ಸಭೆ ನಡೆಸಲಾಯಿತು.
ಸಭೆಯ ನೇತೃತ್ವವನ್ನು ಮಾಜಿ ರಾಜಾಧ್ಯಕ್ಷ ಹಾಗೂ ಸಂಘದ ಮಹಾ ಪೋಷಕ ಜೆ.ಶ್ರೀನಿವಾಸ ಹಾಗೂ ಜಿಲ್ಲಾಧ್ಯಕ್ಷ ಪ್ರೊ.ವಸಂತಮ್ಮ ವಹಿಸಿದ್ದರು.
ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಮತ್ತು ಜನಾಂಗದ ವಧು-ವರರ ಸಮಾವೇಶ ನ.18ರ ಭಾನುವಾರ ನಡೆಸಲು ಹಾಗೂ ನೂತನ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮುಖಂಡರಾದ ಭೋರಪ್ಪ, ಕುಮಾರ, ದಾಸಪ್ಪ, ಸುನಂದಮ್ಮ, ಬಸವರಾಜು, ಚಿಕ್ಕಯ್ಯ, ಚಿಕ್ಕಲಿಂಗಯ್ಯ, ಡಾ.ಪೂರ್ಣಾನಂದ, ಪುಟ್ಟಸ್ವಾಮಿ ಹಾಗೂ ಇನ್ನಿತರರು ಭಾಗವಹಿಸಿದ್ದರು.