ಮೈಸೂರು

ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಗೆ ಎನ್.ಎ.ಬಿ.ಹೆಚ್ ನಿಂದ ಮಾನ್ಯತೆ : ಡಿ. 15ರಂದು ಪ್ರಮಾಣಪತ್ರ ವಿತರಣೆ

ಮೈಸೂರು,ಡಿ.13:- ಲಲಿತಾದ್ರಿಪುರ ರಸ್ತೆ ಆಲನಹಳ್ಳಿಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಗೆ ಎನ್.ಎ.ಬಿ.ಹೆಚ್ ನಿಂದ ಮಾನ್ಯತೆ ದೊರಕಿದೆ ಎಂದು ಜೆಎಸ್ಎಸ್ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಮಹೇಶ್ ತಿಳಿಸಿದರು.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಷನಲ್ ಆಕ್ರೆಡಿಟೇಷನ್ ಬೋರ್ಡ್ ಫಾರ್ ಹಾಸ್ಪಿಟಲ್‌ ಅಂಡ್ ಹೆಲ್ತ್ ಕೇರ್ ಪ್ರೊವೈಡರ್ಸ್ ನಿಂದ ಪ್ರಮಾಣ ಪತ್ರ ವಿತರಿಸಲಾಗಿದ್ದು, ದೇಶದ ಅತ್ಯುತ್ಕೃಷ್ಟ ಗುಣಮಟ್ಟದ, ಮಾನವೀಯ ಮೌಲ್ಯಗಳುಳ್ಳ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆಗಳಿಗೆ ಈ ಮಾನ್ಯತಾ ಪ್ರಮಾಣಪತ್ರವನ್ನು ನೀಡಲಾಗುತ್ತದೆ.ಈ ಪ್ರಮಾಣ ಪತ್ರವು ಜೆ ಎಸ್ ಎಸ್ ಆಯುರ್ವೇದ ಆಸ್ಪತ್ರೆಗೆ ಬಂದಿರುವುದು ಬಹಳ ಸಂತಸಕರ ಸಂಗತಿಯಾಗಿದ್ದು, ಡಿಸೆಂಬರ್ 15ರಂದು ಸಂಜೆ 6 ಕ್ಕೆ ಸಂಸ್ಥೆಯ ಆವರಣದಲ್ಲಿ ಪ್ರಮಾಣಪತ್ರ ವಿತರಿಸಲಾಗುತ್ತದೆ.  ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣವಿಭಾಗದ ಪ್ರಮುಖರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: