
ಮೈಸೂರು
ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿ: ಸವಾರ ಸಾವು
ನಂಜನಗೂಡಿನ ರಸ್ತೆಯಲ್ಲಿ ಬೈಕ್ ಸವಾರನೋರ್ವ ರಸ್ತೆ ವಿಭಜಕ್ಕೆ ಡಿಕ್ಕೆ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂಬದಿ ಸವಾರನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡೂರಾವ್ ನಗರ ನಿವಾಸಿ ಪುಟ್ಟಯ್ಯ ಎಂಬುವವರ ಪುತ್ರ 26 ವರ್ಷದ ರವಿ ಮೃತಪಟ್ಟ ವ್ಯಕ್ತಿ. ಅಪಘಾತದಲ್ಲಿ ತಲೆಗೆ ತೀವ್ರಸ್ವರೂಪದ ಗಾಯವಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂಜನಗೂಡು ರಸ್ತೆಯ ಸೂಯೇಜ್ ಫಾರಂ ಸಮೀಪ ಗುಂಡೂರಾವ್ ನಗರದ ರಸ್ತೆಯಲ್ಲಿ ನ.14ರ ಬೆಳಗ್ಗೆ 9.15ಕ್ಕೆ ಘಟನೆ ಸಂಭವಿಸಿದ್ದು, ಬೈಕ್ ಚಾಲನಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಹಿಂಬದಿಯ ಸವಾರ ಮಹಾರಾಷ್ಟ್ರದ ತುಷಾರ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. (ಸಾಂದರ್ಭಿಕ ಚಿತ್ರ)