ಮೈಸೂರು

ಒತ್ತುವರಿ ಜಾಗ ತೆರವು : ಮನಪಾ ಕಾರ್ಯಾಚರಣೆ

ಮೈಸೂರು ಮಹಾನಗರಪಾಲಿಕೆ ಒತ್ತುವರಿ ಜಾಗಗಳನ್ನು ತೆರವುಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇರಿಸಿದೆ. ನಗರದ ಕೆ.ಆರ್.ಮೊಹಲ್ಲಾದಲ್ಲಿನ ನಿವಾಸಿಯೋರ್ವರು ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಡುವ ಎರಡೂವರೆ ಅಡಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಅದನ್ನು ತೆರವುಗೊಳಿಸಲಾಗಿದೆ.

ಕೆ.ಆರ್.ಮೊಹಲ್ಲಾದ ವಿ.ವಿ.ಮಾರ್ಕೆಟ್ ಹಿಂದುಗಡೆ ನಿವಾಸಿ ಇಂದಿರಮ್ಮ ಎಂಬವರು ತಮ್ಮ ಮನೆಯ ಮುಂದುಗಡೆ ಇದ್ದ ಎರಡೂವರೆ ಅಡಿ ಜಾಗವಾದ ಫುಟ್ ಪಾತ್ ನ್ನು ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ತೆರವುಗೊಳಿಸುವಂತೆ ನಗರಪಾಲಿಕೆ ಅಧಿಕಾರಿಗಳು ಈಗಾಗಲೇ ನೋಟೀಸ್ ನೀಡಿದ್ದರು. ಆದರೆ ಇಂದಿರಮ್ಮ ಪಾಲಿಕೆಯ ಸೂಚನೆಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಮಹಾನಗರಪಾಲಿಕೆ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯ ತಂಡ ಮತ್ತು ಜೆಸಿಬಿಯೊಂದಿಗೆ ಸ್ಥಳಕ್ಕೆ ತೆರಳಿದ್ದು, ಕೆ.ಆರ್.ಠಾಣೆಯ ಪೊಲೀಸರ ಬಂದೋಬಸ್ತ್ ನಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದಾರೆ.

ಇದೀಗ ಮೈಸೂರು ಮಹಾನಗರಪಾಲಿಕೆಯು ಒತ್ತುವರಿ ಜಾಗದ ತೆರವಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನತೆ ಒತ್ತುವರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

Leave a Reply

comments

Related Articles

error: