ಮೈಸೂರು

ರವಿ ಮಾಗಳ್ಳಿ ಸಾವು ಪ್ರಕರಣ : ಇನ್ನೂ ಪೊಲೀಸರ ಕೈ ಸೇರದ ಮರಣೋತ್ತರ ವರದಿ

ಮೈಸೂರಿನ ಪಿರಿಯಾಪಟ್ಟಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರವಿ ಸಾವು ಸಂಭವಿಸಿ ಹತ್ತು ದಿನಕಳೆದರೂ ಘಟನೆಯ ನಿಖರ ಕಾರಣ ತಿಳಿದು ಬಂದಿಲ್ಲ.

ರವಿ ಮಾಗಳಿಯದ್ದು ಕೊಲೆಯೋ ಅಥವಾ ಅಪಘಾತವೋ ಎನ್ನುವ ಕುರಿತು ಪೊಲೀಸರಿಗೆ ಸರಿಯಾದ ಮಾಹಿತಿ ಲಭಿಸಿಲ್ಲ. ಕಾರಣ ಘಟನೆಯಾಗಿ ಹತ್ತು ದಿನ ಕಳೆದರೂ ಪೊಲೀಸರಿಗೆ ಇನ್ನೂ ಕೂಡ ಮರಣೋತ್ತರ ಪರೀಕ್ಷೆಯ ವರದಿಯೇ ಸಿಕ್ಕಿಲ್ಲ.

ನಿಖರವಾದ ವರದಿ ಇಲ್ಲದ ಕಾರಣ ಯಾರೊಬ್ಬರ ಬಂಧನವೂ ಆಗಿಲ್ಲ. ಮೆಲ್ನೋಟಕ್ಕೆ ಸಹ ಇದು ಕೊಲೆಯೋ ಅಥವಾ ಅಪಘಾತವೋ ಎಂದು ತಿಳಿದು ಬರದ ಕಾರಣ ಎಕ್ಸಪರ್ಟ್ಸ್‌ಗಳ ಮೊರೆ ಹೋಗಿದ್ದಾರೆ  ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಎಕ್ಸ್ ಪರ್ಟ್ ಗಳ ಮೋರೆ ಹೋದರೂ ಕೂಡ ರವಿಯ ಅನುಮಾನಾಸ್ಪದ ಸಾವಿನ ಸುಳಿವು ಮಾತ್ರ ಸಿಗದೆ ಇರುವುದು ಪ್ರಕರಣವನ್ನು ಗಂಭೀರವಾಗಿಸಿದೆ.

ನವೆಂಬರ್ 4ರ ರಾತ್ರಿ ರವಿ ಮಾಗಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಈ ಸಂಬಂಧ ನವೆಂಬರ್ 5ರಂದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ರವಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಪಿರಿಯಾಪಟ್ಟಣ ಠಾಣೆಯಲ್ಲಿ ರವಿ ಮಾಗಳ್ಳಿ ಅವರ ಅನುಮಾನಾಸ್ಪದ ಸಾವಿನ ದೂರು ಸಹ ದಾಖಲಾಗಿತ್ತು. ಈ ವೇಳೆ ರವಿ ಸಾವಿನ ತನಿಖೆಗಾಗಿ ಪಿರಿಯಾಪಟ್ಟಣ ತಾಲೂಕು ಬಂದ್ ಮಾಡಲಾಗಿತ್ತು.  ಪ್ರಕರಣದ ಗಂಭೀರತೆ ಅರಿತು  ಐಪಿಎಸ್ ಅಧಿಕಾರಿ ಹರೀಶ್ ಪಾಂಡೆ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿತ್ತು. ಎ‌ಎಸ್‌ಪಿ ಕಲಾಕೃಷ್ಣಸ್ವಾಮಿಯವರಿಗೆ ತನಿಖೆಯ ಮೇಲುಸ್ತುವಾರಿ ನೀಡಿ ಜಿಲ್ಲಾ ಎಸ್.ಪಿ ರವಿ ಡಿ ಚೆನ್ನಣ್ಣ ನವರ್ ಆದೇಶ ನೀಡಿದ್ದರು.  ಆದರೆ ಇನ್ನೂ ಇದು ಅಪಘಾತವೋ ಅಥವಾ ಕೊಲೆಯೋ ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವೇ ನಿಖರವಾಗಿ ತಿಳಿಯಲಿದೆ.

Leave a Reply

comments

Related Articles

error: