ಮೈಸೂರು

ಮುಳ್ಳೂರು ಗ್ರಾಮದಲ್ಲಿ ಕಾಣಿಸಿಕೊಂಡ ಒಂಟಿಸಲಗ

ಮೈಸೂರು,ಡಿ.13-ಮೈಸೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಹೊರವಲಯದಲ್ಲಿರುವ ಕಾವೇರಿ ಹೊಳೆ ಬಳಿಯ ಜಮೀನೊಂದರಲ್ಲಿ ಮಂಗಳವಾರ ಮುಂಜಾನೆ ಒಂಟಿಸಲಗವೊಂದು ಕಾಣಿಸಿಕೊಂಡು ಆಂತಕ ಮೂಡಿಸಿತ್ತು.

ಮುಳ್ಳೂರು ಗ್ರಾಮದ ಏತ ನೀರಾವರಿ ಬಳಿ ಬೆಳಿಗ್ಗೆ 4 ಘಂಟೆ ಸಮಯದಲ್ಲಿ ಕಾಣಿಸಿಕೊಂಡ ಆನೆ 9 ಘಂಟೆಯವರೆಗೆ ಜಮೀನಿನ ಮೇವು ತಿಂದು ಹಿಂದಿರುಗಿತು.

ಕಾವೇರಿ ನದಿಯನ್ನು ದಾಟಿಕೊಂಡು ಬಂದು ಮರಳು ಜಾಡಿನ 7ನೇ ಪಾಯಿಂಟ್ ಮಾದೇಶ್ ಹಾಗೂ ಮಹದೇವಸ್ವಾಮಿ ಅವರ ಜಮೀನಿನಲ್ಲಿ ಬಳಿ ಅಡ್ಡಾಡುತ್ತಿದ್ದ ಆನೆಯ ಕಂಡು ಜಮೀನಿಗೆ ತೆರಳಿದ್ದ ರೈತರು ಆತಂಕಗೊಂಡಿದ್ದರು. ಗ್ರಾಮಸ್ಥರ, ಮಕ್ಕಳ ಕೂಗಾಟ ಹೆಚ್ಚಾದಂತೆ ಆನೆಯು ಕಾವೇರಿ ಹೊಳೆ ದಾಟಿ ಟಿ.ಎನ್.ಪುರದ ಕುಕ್ಕೂರು ಗ್ರಾಮದ ನದಿಯ ತೀರದ ಬಳಿಗೆ ಹೋಯಿತು.

ಕಳೆದ ಮೂವತ್ತು ವರ್ಷಗಳ ನಂತರ ಭಾಗದಲ್ಲಿ ಆನೆ ಕಾಣಿಸಿಕೊಂಡಿದೆ. ಆದರೆ ಯಾವುದೇ ಹಾನಿ ಮಾಡದೆ ಹಿಂತುರಿಗಿ ಹೋಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮುಳ್ಳೂರು ಗ್ರಾಮದ ಬಳಿಗೆ ಆನೆ ಬಂದು ಸತತ ನಾಲ್ಕು ಘಂಟೆಗಳ ಕಾಲ ಅಡ್ಡಾಡುತ್ತಾ ಇರುವುದನ್ನು ಕಂಡು ರೈತರು ಭಯಗೊಂಡಿದ್ದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇರುವುದು ಅವರ ನಿರ್ಲಕ್ಷತೆ ಎದ್ದು ತೋರುತ್ತದೆ ಎಂದು ಜನರು ಆರೋಪಿಸಿದ್ದಾರೆ. (ವರದಿ-ಕೆ.ಎಸ್, ಎಂ.ಎನ್)

Leave a Reply

comments

Related Articles

error: